ಇತ್ತೀಚೆಗಷ್ಟೆ ಓದಿ ಮುಗಿಸಿದ ' ಪ್ರೇಮಾ ಕಾರಂತ'ರ ಆತ್ಮಕಥೆ ' ಸೋಲಿಸಬೇಡ ಗೆಲಿಸಯ್ಯಾ' ರೋಮಾಂಚನಕಾರಿ ಪಯಣವಲ್ಲದೆ ಮನಸ ಕೊಳದೊಳಗೆ ಕಲ್ಲೆಸೆದಂತೆ ಅಲೆಗಳೆಬ್ಬಿಸುತ್ತಲೇ ಇತ್ತು.
ತಮ್ ಜೀವನ ಪಯಣದ ಅತ್ಯಂತ ವಿವಾದಾತ್ಮಕ ಘಟನೆಯಾದ ಕಾರಂತ ವಿಭಾ ಮಿಶ್ರ ಪ್ರಕರಣದಿಂದ ಕಥನ ಶುರು ಮಾಡುವ ಪ್ರೇಮಾ ಕಾರಂತರು ಇಡೀ ಪಯಣವನ್ನ ಹಿಮ್ಮುಖ ಮುಮ್ಮುಖವಾಗಿ ಸಾಗಿಸುವ ರೀತಿಯೇ ಅದಭುತ. ತನ್ನ ಓಡಾಟಗಳು, ನಾಟಕಗಳು, ವಿವಾದಗಳು, ಫಣಿಯಮ್ಮ ಚಲನಚಿತ್ರ ಮೂಡಿದ ಬಗೆ, ಸಂಕಷ್ಟದ , ಖುಷಿಯ(?) ಕಾಲ ಹೀಗೆ ವಿವರಗಳು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತಾ ಹೋಗುತ್ತಾರೆ.
ಆದರೆ ಕೆಲ ಪ್ರಶ್ನೆಗಳು ಉದಾಹರಣೆಗೆ ಇಡೀ ಕಥನದಲ್ಲಿ ಎಲ್ಲಿಯೂ ಸಂತಾನದ ಬಗ್ಗೆ, ಆ ಆಸೆಯ ಬಗ್ಗೆ ಹಾಗೆ ನಮ್ಮಂತಹ ಸಾಮಾನ್ಯರಿಗೆ ಮಹತ್ವದ್ದು ಅನಿಸಬಹುದಾದ ಸಂಗತಿಗಳ ಪ್ರಸ್ತಾವವೂ ಆಗುವುದಿಲ್ಲ; ಆ ಮಟ್ಟಿಗೆ ಇದೊಂಥರಾ ಸಾರ್ವಜನಿಕ ಕಥನವಾಗುತ್ತದೆ.
ಇನ್ನು ಅವರ ಆತ್ಮಕಥೆಯಾಗಿರುವುದರಿಂದ ಅವರ ನಿಲುವುಗಳು ಢಾಳಾಗೇ ಕಾಣುತ್ತವೆ ನಮಗೆ ಒಪ್ಪಿಗೆಯಾಗದಿದ್ದರೂ.
ಹಾಗೆಯೇ ಇದು ಆ ಕಾಲದ ಸಾಂಸ್ಕ್ರತಿಕ ಪಲ್ಲಟಗಳ ದಾಖಲೆ ಕೂಡಾ,
ಪುಸ್ತಕ ಓದಿ ಮುಗಿಸಿದರೂ ಪ್ರೇಮಾ ಕಾರಂತರು ಕಾಡುತ್ತಾರೆ ಮತ್ತು ಆ ಮೂಲಕ ಗೆಲ್ಲುತ್ತಾರೆ!
Monday, September 9, 2013
ಪ್ರೇಮಾ ಕಾರಂತ ಆತ್ಮಕಥನ ' ಸೋಲಿಸಬೇಡ, ಗೆಲಿಸಯ್ಯಾ'
Saturday, August 24, 2013
ಬೊಜ್ಜು
ಹೀಗೆ ತೋರ ಕಾಣುವ
ಹೊಟ್ಟೆಯನ್ನೂ,
ಶರ್ಟ್ ಮಡಿಸುವಂತೆ ಮಡಿಸಿ
ಇನ್ ಮಾಡುವಂತಿದ್ದರೆ;
ಒಂಚೂರು ದೂರಕ್ಕೂ 'ಉಸ್ಸಪ್ಪ',
ಈಗಷ್ಟೇ ಹೊಟ್ಟೆ ತುಂಬ ತಿಂದು
ರಾತ್ರಿ ಏನೂ ಬೇಡಾ ಅಂದರೂ,
ಹಗಲು ಮಗುಚಿ ಇರುಳ
ಪುಟ ತೆರೆದಂತೆ,
'ಅಬ್ಬಬ್ಬಾ' ತಾಳಲಾರದೆ,
ಇನ್ನು, ಇನ್ನಷ್ಟು;
ಒಂದು ಗಂಟೆ ವಾಕು, ಅರ್ಧ ಗಂಟೆ ಯೋಗ,
ಒಂಚೂರು ನಿಂಬೆ ರಸಕ್ಕೆ ಜೇನು,
ಬೇಡವಾದರೆ
ಬೇವಿನಸೊಪ್ಪು;
ಮರೆತೀರಾ ಖಾಲಿ ಹೊಟ್ಟೆಗೆ!
ಎರಡು ದಿನ, ತಪ್ಪಿದರೆ ಮೂರು,
ಮತ್ತೆ ಮೊದಲಿನಂತೆ,
ಯಾರು ಏಳ್ತಾರೆ ಅಷ್ಟು ಬೇಗ?
ಸ್ವಲ್ಪ ಅತ್ತಿತ್ತ ಆದರೂ ಗ್ಯಾಸು;
ಕಲ್ಲೇ ತಿಂದರೂ ಲಟ್ಟಕನಿರುವ ಹಳಬರು,
ಐ ಆ್ಯಮ್ ವಾಚಿಂಗ್ ಮೈ ಫಿಗರ್ ಹೊಸಬರು,
ಕನಸಲೂ ಸಿಕ್ಸು ಪ್ಯಾಕು,
ಗೂಗಲ್ ತುಂಬಾ ಏಳೇ ದಿನದಲ್ಲಿ
ಹತ್ತು ಕೆ.ಜಿ. ಖಾಲಿ
ಜಾಹೀರಾತು,
ನಿನ್ನೆಯ ಫೋಟೋಗಳ ತುಂಬಾ
ಆಪ್ಯಾಯಮಾನ ನಿಟ್ಟುಸಿರು;
ಕೈ ಮತ್ತೆ ಪ್ಲೇಟಿನೆಡೆಗೇ,
ಯಾರು ಬದುಕಿದ್ದಾರೆ ಸಾವಿರ ವರ್ಷ??
ಇದು ಮುಗಿದರೆ ಮತ್ತೆ ಮುಟ್ಟಲ್ಲ ದೇವರಾಣೆ;
ಟೈರು ಸವೆಯುವ ಆಸೆಗೆಲ್ಲಿದೆ ಕೊನೆ!!
Sunday, July 28, 2013
ಸಿಡ್ನಿಶೆಲ್ಡನ್ jotheya ಮಳೆಗಾಲ
ಅರೆರೆ, ಚೆನ್ನಾಗಿದೆಯಲ್ಲ, ಅಂತ ಊರಿಗೆ ಬಂದವನೇ ಒಂದೊಂದಾಗಿ ಅವರ ಕಾದಂಬರಿಗಳ ಬೆನ್ನುಬಿದ್ದೆ.
ಹಿಡಿದು ಕೂರಿಸುವ , ಹಿಡಿತಕ್ಕೆ ಸಿಗುವ ಇಂಗ್ಲೀಷಿನ ಷೆಲ್ಡನ್ ಸಮಯ ಕೊಳ್ಳಲು ಒಳ್ಳೆ ಸಂಗಾತಿ;
'ಅದರ್ ಸೈಡ್ ಆಫ್ ಮಿಡ್ ನೈಟ್ ','ವಿಂಡ್ ಮಿಲ್ಸ್ ಆಫ್ ಗಾಡ್ಸ್ ',ಸಾಂಡ್ಸ್ ಆಫ್ ಟೈಮ್ ',ಮೆಮೊರೀಸ್ ಆಫ್ ಮಿಡ್ನೈಟ್ ','ಸ್ಕೈ ಈಸ್ ಫಾಲಿಂಗ್ ','ಡೂಮ್ಸ್ ಡೇ ಕಾನ್ಸ್ಪಿರಸಿ ','ಬ್ಲಡ್ ಲೈನ್' ಮುಗಿಸಿದೆ.ಇನ್ನೂ ಹಲವಾರು ಪುಸ್ತಕ ಗೆಳೆಯ ಅಲ್ತಾಫ್ ತಮ್ಮ ಖಜಾನೆಯಿಂದ ಎತ್ತಿ ಕೊಟ್ಟರು;
ಅಲೆದಾಡಿ ತಂದ ಕನ್ನಡ ಪುಸ್ತಕಗಳು ಕರೆಯುತ್ತಿದ್ದರೂ , ಇವನ್ನು ಮುಗಿಸಬೇಕು ಅಂತ ಹಟ ಹಿಡಿದು ಕೂತಿದ್ದೇನೆ!
ಹೆಂಗಿದ್ದರೂ ಮನಸು ಚಿಟ್ಟೆ ತರಾ ಆಲ್ವಾ ! ಮತ್ತೇನಾದರೂ ಕರೆದರೆ ಹೊರಡೋದೇ;
ಸುರಿವ ಮಳೆಗೆ , ಹೊರ ಹೋಗಲೂ ಮನಸ್ಸಿಲ್ಲದೆ, ಡ್ಯೂಟಿಗೆ 'ಛೇ ' ಅಂದುಕೊಳ್ತಾ ಹೋಗೊಕೂ ಉದಾಸೀನ;
ಸದ್ಯಕ್ಕಿಷ್ಟೇ ;
Thursday, July 4, 2013
what's with tea?
Tuesday, June 25, 2013
ಜನಾರ್ದನ ಭಟ್ಟರ 'ಅನಿಕೇತನ'
ಜನಾರ್ದನ ಭಟ್ ರ ನಡುಕಣಿ ಕಾದಂಬರಿ ತ್ರಿವಳಿಗಳಲ್ಲಿ ಕೊನೆಯದಾದ ಇದು (ಉಳಿದೆರಡು 'ಉತ್ತರಾಧಿಕಾರ' ಮತ್ತು 'ಹಸ್ತಾಂತರ' ) ಒಂದು ಕಾಲಗಟ್ಟದ ಜನಜೀವನದ ಚಿತ್ರಣವನ್ನು ಯಶಸ್ವಿಯಾಗಿ ತೆರೆದಿಡುವುದರ ಮೂಲಕ ಗೆಲ್ಲುತ್ತದೆ.
ಧೂಳು ಕೊಡವಿದೆ !
Saturday, March 2, 2013
ನಶೆ
Saturday, June 16, 2012
ಕಿಟಕಿ ಮತ್ತು ಆಕಾಶ
ನನ್ನ ರೂಮು
ನನ್ನ ಕಿಟಕಿ
ಹೊರಗೆ ಚೌಕಟ್ಟಿನ ಆಕಾಶ;
ನೋಡಿದರೆ ಕಾಣುವ.
ನನ್ನೊಳಗೆ ಬೆಳೆಯುವ.
ನನ್ನದಲ್ಲದ ಆಕಾಶ;
ಇಲ್ಲಿರದ ಅಲ್ಲಿ ಸಲ್ಲದ
ಭಾವಗಳ
ಕಿಟಕಿಯಿಂದಾಚೆ ಎಸೆದು
ನೆಲ ಮುಟ್ಟುವ ಮೊದಲೇ
ಅಜ್ಜನ ಗಡ್ಡದಂತೆ ತೇಲಿ,
ಮಾಯವಾಗಿ,
ಒಂದು ದಿನ ನಾನೂ ಹಾಗೆ,
ಎಲ್ಲವನು ಮುಷ್ಟಿಯಲಿ,
ಸೋರದಂತೆ ಹಿಡಿದು
ತುಂಬ ದೂರಕೆ ತಿರುಗಿ
ಬಾರದಂತೆ
ಎಸೆಯಬೇಕೆಂಬ ಕನಸು,
ಜೊತೆಗೆ ನಾನು ಕಳೆದುಹೋಗುವ ಭಯ;
ಮೀರಲಾರದ ತವಕ ಮತ್ತು
ನೋವಿರದ ನಾಳೆಗಳ ಆಸೆ;
ಹೇಗೂ,
ರೂಮೂ ಇದೆ
ಕಿಟಕಿಯೂ ಇದೆ
ಅಸ್ತಿತ್ವದ್ದೇ ಪ್ರಶ್ನೆ!



