ಬೆಳಗ್ಗೆ ಆಡಿನ ಹಾಲು ಕರೆಯುವುದು. ಸ್ವಲ್ಪ ಅದನ್ನೇ ಕುಡಿಯುವುದು. ಆಮೇಲೆ ಆಡುಗಳಿಗೆ ಹುಲ್ಲು ಹಾಕಿ,ನೀರು ಕುಡಿಸಿ, ಕಾಲಾಡಿಸಲು ಕರಕೊಂಡು ಹೋಗುವುದು,ಅವು ಅಂಕೆ ತಪ್ಪದಂತೆ ನೋಡಿಕೊಳ್ಳುವುದು, ಹೀಗೆ ನಜೀಬ್ ಕೆಲಸ ಮಾಡಿ ಮಾಡಿ ಬಳಲಿ ಬೆಂಡಾಗುತ್ತಾನೆ.ಭಾಷೆಯ ಪರಿಚಯವಿಲ್ಲದೆ ಕಣ್ಣು ಹಾಯಿಸುವವರೆಗಿನ ಮರಳುಗಾಡಿನ ಏಕತಾನತೆಗೆ,ತನ್ನ ಹೊರತು ಇನ್ನೊಂದು ಮನುಷ್ಯ ಜೀವಿಯ ಸಂಗಾತವಿಲ್ಲದೆ ಬಳಲುತ್ತಾನೆ. ಕುರಿಗಳ ಉಣ್ಣೆ ಕತ್ತರಿಸಲು ಬರುವ ಕೆಲಸಗಾರರ ದೇಹ ವಾಸನೆ ಪಡೆಯಲೆಂದು ಹತ್ತಿರ ಹೋಗಿ ನಿಲ್ಲುವಷ್ಟು ವಿಚಲಿನಾಗುತ್ತಾನೆ.
Thursday, November 12, 2015
ಆಡುಜೀವನ
ಬೆಳಗ್ಗೆ ಆಡಿನ ಹಾಲು ಕರೆಯುವುದು. ಸ್ವಲ್ಪ ಅದನ್ನೇ ಕುಡಿಯುವುದು. ಆಮೇಲೆ ಆಡುಗಳಿಗೆ ಹುಲ್ಲು ಹಾಕಿ,ನೀರು ಕುಡಿಸಿ, ಕಾಲಾಡಿಸಲು ಕರಕೊಂಡು ಹೋಗುವುದು,ಅವು ಅಂಕೆ ತಪ್ಪದಂತೆ ನೋಡಿಕೊಳ್ಳುವುದು, ಹೀಗೆ ನಜೀಬ್ ಕೆಲಸ ಮಾಡಿ ಮಾಡಿ ಬಳಲಿ ಬೆಂಡಾಗುತ್ತಾನೆ.ಭಾಷೆಯ ಪರಿಚಯವಿಲ್ಲದೆ ಕಣ್ಣು ಹಾಯಿಸುವವರೆಗಿನ ಮರಳುಗಾಡಿನ ಏಕತಾನತೆಗೆ,ತನ್ನ ಹೊರತು ಇನ್ನೊಂದು ಮನುಷ್ಯ ಜೀವಿಯ ಸಂಗಾತವಿಲ್ಲದೆ ಬಳಲುತ್ತಾನೆ. ಕುರಿಗಳ ಉಣ್ಣೆ ಕತ್ತರಿಸಲು ಬರುವ ಕೆಲಸಗಾರರ ದೇಹ ವಾಸನೆ ಪಡೆಯಲೆಂದು ಹತ್ತಿರ ಹೋಗಿ ನಿಲ್ಲುವಷ್ಟು ವಿಚಲಿನಾಗುತ್ತಾನೆ.
Wednesday, November 4, 2015
ತೂಗುದೀಪ
ವರೂ , ಗೆಳೆಯ ಗುರುಪ್ರಸಾದರೂ ತಲಾ ಒಂದೊಂದು ಕವಿತಾ ಸಂಕಲನ ತಂದ ಮೇಲೂ, ನನ್ನ ಅಭಿಪ್ರಾಯವೇನು ಬದಲಾಗಿರಲಿಲ್ಲ. ಆದರೆ ಅವರ ಬಗ್ಗೆ ಮತ್ತು ಇಂತಹ ಕೆಲಸಗಳಿಗೆ ಒತ್ತಾಸೆಯಾಗಿ ನಿಂತ ಕರುಣಾಕರರ ಮೇಲೂ ಭಯಂಕರ ರೆಸ್ಪೆಕ್ಟು ಬೆಳೆಯಿತು. ನಗುವವರ ಮುಂದೆ ’ದೆತೊಣು ಕುಡೊಂಜಿ ವಿಷಯ ತೆಲಿಪ್ಪೆರ ’ ಅಂತಾನೋ, ’ ಮುಕ್ಲೇಗ್ ಮರ್ಲಿಯಾ" ಅಂತಾನೋ ಬಂದ ವ್ಯಂಗ್ಯಗಳಿಗೆ ತಲೆಕೆಡಿಸಿಕೊಳ್ಳದೆ ಪ್ರಕಟನೆಗೆ ಹೊರಟರಲ್ಲ ಅದು ಸಾಧನೆ. ಆಮೇಲೆ ನಮ್ಮಂತಹ ನಾಲ್ಕಾರು ಹಣೆಪಟ್ಟಿಯವರ ಒಟ್ಟು ಹಾಕಿ ಒಂದು ಸಂಕಲನವೂ ತಂದಿದ್ದಾಯ್ತು.
ಇವೆಲ್ಲ ನೆನಪಾದದ್ದು ಮೊನ್ನೆ ರವೀಂದ್ರ ಎರಡನೇ ಕವನ ಸಂಕಲನ ’ತೂಗುದೀಪ’ ಬಿಡುಗಡೆಯಾದಾಗ! ವೈಯಕ್ತಿಕವಾಗಿ ನನಗೆ ಇಷ್ಟವಾದ ಕವಿತೆಗಳಿರುವ ಈ ಸಂಕಲನ ನಿಮಗೂ ಇಷ್ಟವಾದೀತು
Tuesday, June 30, 2015
book review: 'a report on the lost soul'
ಈ ಮೇಲಿನ ಪ್ರಶ್ನೆಗಳು ಈಗ ತಾನೇ ಓದಿದ ಗಿರೀಶ್ ರಾಮಚಂದ್ರರ ಚೊಚ್ಚಲ ಕಾದಂಬರಿ ' ಎ ರಿಪೋರ್ಟ್ ಆನ್ ಲೋಸ್ಟ್ ಸೋಲ್' ಓದುವಾಗ ಕಾಡಿತು. ಕಥಾ ನಾಯಕನ ಪ್ರಥಮ ಪುರುಷ ನಿರೂಪಣೆಯಲ್ಲಿ ಸಾಗುವ ಕತೆ ರೈಲು ಪ್ರಯಾಣದ ಅನುಭವ (ನನಗೆ) ಕೊಟ್ಟಿತು. ಐ.ಟಿ. ಜಗತ್ತಿನಲ್ಲಿ ಯಶಸ್ವಿ ಉದ್ಯಮಿಯಾಗಿ ಹೆಸರು ಮಾಡಿ ತನ್ನದೇ ಕಂಪೆನಿಯ ಒಡೆಯನಾದ ನಾಯಕನಿಗೆ ಆ ಯಶಸ್ಸಿನ , ಒತ್ತಡವ ಮತ್ತು ವೈಯಕ್ತಿಕ ಬದುಕನ್ನು ತೂಗಲಾರದೆ ಕಳೆದು ಹೋಗಿದ್ದಾನೆ. ಎಷ್ಟರಮಟ್ಟಿಗೆ ಎಂದರೆ ತನ್ನ ಪತ್ನಿಯನ್ನು ಕೊಲ್ಲಬೇಕೆಂದು ಯೋಚಿಸುವ ಮಟ್ಟಿಗೆ. ಅವನ ಗೆಳೆಯನದ್ದೂ ಅದೇ ಕತೆ.ಕಾರಣ ಬೇರೆ. ಒಬ್ಬ ಯಶಸ್ವೀ ಉದ್ಯಮಿಯಾದರೂ ತನ್ನೊಳಗಿನ ಹುಡುಕಾಟದಲ್ಲಿ ಕಳೆದು ಸೋತುಹೋದ ನಾಯಕ ಮತ್ತೆ ತನ್ನ ಹುಡುಕುವ ಯಾನದಂತೆ ಈ ಕಾದಂಬರಿ ಭಾಸವಾಯಿತು. ಇಲ್ಲಿ ಅವನ ಬಾಲ್ಯದ, ಕಾಲೇಜಿನ ನೆನಪುಗಳಿವೆ. ಆಡಿದ ಆಟಗಳು,ಗೆಳೆಯರಿದ್ದಾರೆ. ಗೆಳತಿಯರ ಸಂಖ್ಯೆಯೂ ಸಾಕಷ್ಟಿದೆ. ಆದರೆ ಇಲ್ಲೆಲ್ಲೋ ನಡುವೆ ಅವನು ಕಳೆದು ಹೋಗಿದ್ದಾನೆ. ನಾನು ಆಶಯವ ಸರಿಯಾಗಿ ಗ್ರಹಿಸಿದ್ದೇ ಆದರೆ ಈ ಹುಡುಕುವ ಗೊಂದಲವೇ ಇದೆಲ್ಲಕ್ಕೂ ಕಾರಣ.
ಕೊನೆಗವನು ಯಶಸ್ವಿಯಾದನೋ ಇಲ್ಲವೋ ಓದಿ ನೋಡಿ.
ಮೊದಲ ಯತ್ನದಲ್ಲಿ ಕತೆ ಇರುವ ಪುಸ್ತಕ ಕೊಟ್ಟದ್ದಕ್ಕೆ ಲೇಖಕರಿಗೆ ಅಭಿನಂದನೆ.
Friday, June 26, 2015
ಸಲೇಮ್ಸ್ ಲಾಟ್ ಮತ್ತು ಡ್ರಾಕುಲ
ಇತ್ತ್ತೀಚೆಗಷ್ಟೆ ಅದರ ಮೂಲ ಪುಸ್ತಕ ಓದಿದೆ. ಅದೂ ಬಹಳ ಇಷ್ಟವಾಯ್ತು. ಸ್ಟೀಫ಼ನ್ ಕಿಂಗ್ ನ ಅತ್ಯುತ್ತಮ ಪುಸ್ತಕಗಳ ಅಂತರ್ಜಾಲ ಪಟ್ಟಿ ಹುಡುಕುವಾಗ ಈ 'ಸಲೇಮ್ಸ್ ಲಾಟ್' ಹೆಸರು ಕಣ್ಣಿಗೆ ಬಿದ್ದು ತರಿಸಿದ್ದೆ. ಓದುತ್ತಾ ಹೋದಂತೆ ಮತ್ತೆ ಹಳೆಯ ನೆನಪುಗಳೆಲ್ಲಾ ಒತ್ತರಿಸಿ ಬಂತು. ಕಿಂಗ್ ತನಗೆ ಮಾತ್ರ ಸಾಧ್ಯವಿರುವ ದಟ್ಟ ಶೈಲಿಯಲ್ಲಿ ಡ್ರಾಕುಲದ ಕತೆಯ ನಿರೂಪಿಸಿದ್ದಾನೆ. ಅವನ ಪುಸ್ತಕಗಳ ಪರಿಚಯವಿರುವವರಿಗೆ ಇದೇನು ಹೊಸದಲ್ಲ. ಕಣ್ಣಿಗೆ ಕಟ್ಟುವ ವರ್ಣನೆಗಳಿಂದ ಕಾಲ್ಪನಿಕ ಊರನ್ನೂ, ಅಲ್ಲಿನ ಜನರ ಒಳಹೊರಗನ್ನೂ ನಮ್ಮೆದುರು ತಂದು ನಿಲ್ಲಿಸುವಲ್ಲಿ ಕಿಂಗ್ ಸೋತದ್ದೇ ಇಲ್ಲ. ದೆವ್ವ ಭೂತದ ಕತೆಯಲ್ಲಿ ಆಸಕ್ತಿ ಇರುವವರು ಓದಲೇಬೇಕಾದ ಕಾದಂಬರಿ
Saturday, January 17, 2015
ಮಿಸ್ಕಿನ್ ನ 'ಪಿಸಾಸು'
Saturday, January 10, 2015
ಇದು ಕನಸೇ?!
ಆದರೂ ಯಾರಿಗೆ ಯಾವಾಗ ಗಡಿ ಹಾರುವ ಹಂಬಲ ಬರುತ್ತೋ ಯಾರಿಗೆ ಗೊತ್ತು? ಇವನ ಕ್ಷಣದ ಹುಚ್ಚಿಗೆ ನಾನು ಇಲ್ಲವಾಗೋದು ನೆನೆಸಿ ಕಿರಿಕಿರಿಯಾಗತೊಡಗಿತು. ಯಾರೋ ಕಿವಿಯಲ್ಲಿ 'ಕರ್ಮಣ್ಯೇ ವಾದಿಕಾರಸ್ತೇ...' ಅಂತ ಊದಿಹೋದಂತಾಗಿ, ನಾನು ಅವನು ಕೊಟ್ಟ ಪ್ಲೇಟಿನಿಂದ ನಿರ್ಯೋಚನೆಯಿಂದ ,ಚಪ್ಪರಿಸುತ್ತಾ ಒಂದೊಂದಾಗಿ ಪಾನೀಪೂರಿ ತಿನ್ನತೊಡಗಿದೆ.
Saturday, January 3, 2015
'ಸುಮ್ಮನೆ' ಓದಿದ ಗುಂಗು
ಆಮೇಲೆ ಹೈಸ್ಕೂಲಿನ ದಿನಗಳಲ್ಲಿ ಸತ್ಯಕಾಮರ ನಾಯಿ ಮೂಗು, ರಾಜ ಕ್ರೀಡೆ, ಶೃಂಗಾರ ತೀರ್ಥ ಹೀಗೆ ಹಲವಾರು ಪುಸ್ತಕ ಓದಿದೆ. ಬಿಟ್ಟ ಸ್ಥಳಗಳ ತುಂಬಿರಿ ತರಹದ ಅವರ ಬರಹ ಮನಸಿಗೆ ಭಾರವಾಗಿತ್ತು. ಓದಿದರೆ ಏನೋ ಅತೃಪ್ತಿ: (ಎಮ್.ವ್ಯಾಸರ ಓದಿದರೂ ಹಾಗೇ, ಖಾಲಿಯಾಗುವ ಭಯ) ಉಲ್ಲಾಸವಿಲ್ಲ.
ಮತ್ತೆ ಸಿಕ್ಕಿದ್ದು ಅವರ 'ತಂತ್ರಯೋನಿ' ಪಂಚ'ಮ''ಗಳ ನಡುವೆ' ಇವೆರಡು,ಜೊತೆಗೆ ಸುರೇಶ ಸೋಮಪುರರ 'ಅಘೋರಿಗಳ ನಡುವೆ' ಹೊಸ ಜಗತ್ತಿಗೆ ಕಿಂಡಿಯಾಗಿತ್ತು. ಆದರೂ ನನಗೆ ಅಷ್ಟಾಗಿ ಖುಶಿ ಕೊಡದ ಲೇಖಕ ಸತ್ಯಕಾಮ.
ಇತ್ತೀಗಷ್ಟೇ ಅವರ ನೆನಪಿನ ಗ್ರಂಥ 'ಸುಮ್ಮನೆ' ಓದಿದೆ. ವೀಣಾ ಬನ್ನಂಜೆ ಸಂಪಾದಿಸಿರುವ ಇದನ್ನು ಅಭಿನವ ಪ್ರಕಟಿಸಿದೆ. ಒಳ್ಳೆಯ ಸಂಕಲನ. ಸತ್ಯಕಾಮವರ ಬಲ್ಲವರು, ಹಾಗೆಂದು ಭ್ರಮಿಸಿಕೊಂಡವರು ಬರೆದ ಅವರ ಚಿತ್ರಣಗಳ ಸಂಕಲನ. ಕೆಲವರಿಗೆ ಅವರು ಧೂರ್ತ(ಲಂಕೇಶ್..) ಮತ್ತೆ ಕೆಲವರಿಗೆ ಅವಧೂತ..ಹೀಗೆ.
ಇದೊಂತರಾ ಅವರಿವರು ದಯಮಾಡಿದ ತಮ್ಮ ತಮ್ಮ ನೆನಪಿನ ಆಲ್ಬಮ್ ನಿಂದ , ನಾವು ಇಡಿಯ ಚಿತ್ರ ರೂಪಿಸುವ ಯತ್ನ.ಖಾಲಿ ಬಿಟ್ಟದ್ದು ಹಾಗಿದ್ದರೇ ಚೆಂದ ಮತ್ತು ಪರಿಪೂರ್ಣ!
Wednesday, November 5, 2014
ಡಲ್ಲಾಸ್ ಬೈಯರ್ಸ್ ಕ್ಲಬ್:ಸಾವೆಂಬ ಕುದುರೆಯ ಮೇಲಿನ ಪಯಣ
ಡಾಕ್ಟರ್ ವಾಸ್ ಅವನಿಗೆ ಡಿ.ಡಿ.ಸಿ. ಮತ್ತು ಪೆಪ್ಟೈಡ್.ಟಿ. ಕೊಡುತ್ತಾರೆ. ಅದು ಅಮೇರಿಕದಲ್ಲಿ ಎಫ಼್.ಡಿ.ಎ. ಅನುಮತಿ ಪಡೆಯದ್ದರಿಂದ ಅದನ್ನು ಕದ್ದು ಸಾಗಿಸುವ ಕೆಲಸಕ್ಕೆ ಕೈ ಹಾಕುವ ರಾನ್, ಅಮೇರಿಕದ ಬೀದಿಯಲ್ಲಿ ಅದರ ಮಾರಾಟಕ್ಕೆ ಇಳಿಯುತ್ತಾನೆ.ಅವನೊಂದಿಗೆ ಉಭಯಲಿಂಗಿ ರೊಯನ್ ಜೊತೆ ಸೇರುತ್ತಾನೆ. ಇತ್ತ ಆಸ್ಪತ್ರೆಯಲ್ಲಿ ಎ.ಜ಼ೆ.ಟಿ.ಯ ಅಡ್ಡ ಪರಿಣಾಮಗಳ ಅರಿವಿದ್ದರೂ ತನ್ನ ಮೇಲಾಧಿಕಾರಿ ಡಾಕ್ಟರ್ ಸೆವರ್ಡ್ ನ ಆಣತಿಯಂತೆ ಇವ ಸಾಕಿನ್ಸ್ ತನ್ನ ರೋಗಿಗಳಿಗೆ ಅದನ್ನು ಕೊಡುವುದನ್ನು ಮುಂದುವರೆಸುತ್ತಾಳೆ.
ತನ್ನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದದ್ದರಿಂದ ರಾನ್ ,ತನ್ನ ಮದ್ದನ್ನು ಹೊರದೇಶದಿಂದ ತಂದು, ಅಮೇರಿಕದಲ್ಲಿ ಮಾರಾಟ ಮಾಡುವ ವಹಿವಾಟಿಗೆ ಕೈ ಹಾಕುತ್ತಾನೆ. ೪೦೦ ಡಾಲರ್ ಕೊಟ್ಟು ಸದಸ್ಯನಾಗುವ ಅವನ 'ಡಲ್ಲಾಸ್ ಬೈಯರ್ಸ್ ಕ್ಲಬ್' ಜನಪ್ರಿಯವಾಗುತ್ತದೆ. ಆದರೆ ಆಸ್ಪತ್ರೆಯ ಮತ್ತು ಡ್ರಗ್ ಕಂಟ್ರೋಲ್ ಬೋರ್ಡ್ ನ ಕಾಕ ದೃಷ್ಟಿ ಅವನ ಮೇಲೆ ಬಿದ್ದು, ಹೊಸ ಕಾನೂನು ಬೇರೆ ಜಾರಿಗೆ ಬಂದು ಅವನ ವಹಿವಾಟಿಗೆ ಹೊಡೆತ ಬೀಳುತ್ತದೆ. ಅವನ ಉಭಯಲಿಂಗಿ ಗೆಳೆಯನ ಸಾವು ಅವನನ್ನ ಜರ್ಝರಿತನನ್ನಾಗಿಸುತ್ತದೆ. ಹಣ ಮಾಡುವ ಉದ್ದೇಶ ಹಿಂದೆ ಸರಿದು , ಸಾಧ್ಯವಾದಷ್ಟು ಹೆ.ಐ.ವಿ. ಪೀಡಿತರಿಗೆ ಸಹಾಯ ಮಾಡಲು ಶುರು ಮಾಡುತ್ತಾನೆ. ೧೯೮೭ ರಲ್ಲಿ ಎಫ಼್.ಡಿ.ಎ ಮೇಲೆ ಕೇಸು ಹಾಕಿ ಗೆಲ್ಲುತ್ತಾನೆ.
ತನಗೆ ಹೆ.ಐ.ವಿ. ಪತ್ತೆಯಾದ ಏಳು ವರ್ಷಗಳ ನಂತರ ೧೯೯೨ ಸಾವನ್ನಪ್ಪುತ್ತಾನೆ. ಇದಿಷ್ಟು ಜೀನ್ ಮಾರ್ಕ್ ವಾಲ್ಲಿ ನಿರ್ದೇಶಿಸಿದ ೨೦೧೩ ರಲ್ಲಿ ಬಿಡಿಗಡೆಯಾದ ' ಡಲ್ಲಾಸ್ ಬಯರ್ಸ್ ಕ್ಲಬ್' ನ ಸ್ಥೂಲ ಕತೆ.
ಆದರೆ ಇಷ್ಟೇನೇ?
ಮುಖ್ಯ ಪಾತ್ರದಲ್ಲಿ ನಟಿಸಿದ ಮ್ಯಾತ್ಯೂ ಮೆಕ್ ಕಾನಗೆ ಯ ಅಭಿನಯವಂತೂ ಅಧ್ಭುತ. ಆವರ ಪಾತ್ರವಾದ ರಾನ ನ ವಿಲಾಸಿ ಜೀವನ, ರೋಗ ದೃಡಪಟ್ಟ ಮೇಲಿನ ಯಾತನೆ, ಮನುಷ್ಯ ಸಂಬಂಧಗಳು, ಹತಾಶೆ, ಹಪಾಹಪಿ, ಖುಷಿ ಹೀಗೆ ಹಲವು ಭಾವಗಳ ಸಮ್ಮಿಶ್ರಣದ ಈ ಪಾತ್ರಕ್ಕೆ ಅರ್ಹವಾಗೇ ಅತ್ಯುತ್ತಮ ನಟ, ಉಭಯಲಿಂಗಿಯ ರೊಯನ್ ಪಾತ್ರದಲ್ಲಿ ನಟಿಸಿದ ಜರೆಡ್ ಲೆಟೊ ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆಯಿತು.
೮೦ ರ ದಶಕದಲ್ಲಿ ಆಗಿನ್ನು ಹೆ.ಐ.ವಿ. ಪೀಡಿತರಿಗೆ ದೊರೆಯುತ್ತಿದ್ದ ಸಾಮಾಜಿಕ ಅಸ್ಪೃಶ್ಯ ಅನಾದರ, ನಾಗರೀಕ ಸಮಾಜ ಸಲಿಂಗ ಕಾಮಿಗಳ ನಡೆಸುತ್ತಿದ್ದ ರೀತಿ ಹೀಗೆ ಹಲ ಕೆಲವು ಚಿತ್ರಗಳ ಮೂಲಕ ತಟ್ಟುವ ಈ ಸಿನಿಮಾ ಮತ್ತೆ ನೋಡಲೇ ಬೇಕಾದ್ದಾಗಿ ಹಾರ್ಡ್ ಡಿಸ್ಕಲ್ಲಿ ತನ್ನನ್ನು ಸೇವ್ ಮಾಡಿಕೊಂಡಿತು.
Wednesday, July 30, 2014
'ಯಾನ'ದ ಯಾನದಲ್ಲಿ
ಪುಸ್ತಕವೊಂದು ಬಿಡುಗಡೆಯಾಗುವ ಮೊದಲೇ ತುದಿಗಾಲಲ್ಲಿ ನಿಂತು, ಖರೀದಿಸಿದ ಕೂಡಲೇ ಬಿಸಿ ಬಿಸಿ ಯಾಗಿ ಓದಿ ಅಭಿಪ್ರಾಯ ದಾಖಲಿಸುವ ಪದ್ಧತಿಯೂ, ಹಾಗೆ ಕಾದು ಕೊಳ್ಳುವಂತೆ ಮಾಡುವ ಲೇಖಕರೂ ಕನ್ನಡಕ್ಕೆ ಹೊಸದು. ನನ್ನ ಅಥವಾ ನನ್ನ ಸಮಕಾಲೀನರಿಗೆಲ್ಲ ಹ್ಯಾರಿ ಪಾಟರ್ ಸರಣಿಯ ಪುಸ್ತಕಗಳ ದಾಖಲೆ ಮಾರಾಟದ ಕಥೆ ನೋಡಿ, ಕೇಳಿ ಗೊತ್ತಷ್ಟೆ. ಕನ್ನಡದ ಇನ್ನೂ ಒಂದು ಪೂರ್ವಾಗ್ರಹ ಪೀಡಿತ ಅಭಿಪ್ರಾಯ ಏನೆಂದರೆ ಅಧಿಕ ಮಾರಾಟವಾಗುವ ಪುಸ್ತಕಗಳು ಸಾಂಸ್ಕೃತಿಕವಾಗಿ ಮಹತ್ವದಲ್ಲ ಎಂದು. ಇದು ಯಾರು ಹುಟ್ಟು ಹಾಕಿದ್ದು ಹೇಗೆ ಬೆಳೆದು ಬಂತು ಅನ್ನುವುದು ಇಲ್ಲೆ ಅನಗತ್ಯ;
ಈಗಷ್ಟೆ ಮುಗಿಸಿದ ನಿಮ್ಮ ಹೊಸ ಕಾದಂಬರಿ 'ಯಾನ'ದ ಕಥಾ ಪ್ರಪಂಚ ನಿಮ್ಮ ಓದುಗ ವರ್ಗಕ್ಕೆ ಅಪರಿಚಿತವೇನಲ್ಲ. ದಶಕಗಳಿಂದ ನಿಮ್ಮ ಕಾದಂಬರಿಗಳ ಪಾತ್ರ ಪ್ರಪಂಚದಲ್ಲಿ ಮುಳುಗೇಳುತ್ತಿದ್ದ ನಮಗೆಲ್ಲಾ ಇವರುಗಳು ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಎದುರಾಗುವವರೇ;
ಕಥೆಯನ್ನು ಹೇಳುವುದು ಈಗಂತೂ ತೀರಾ ಅನುಚಿತ, ಅದು ಓದಲು ಕಾಯುವವರ ರಸಭಂಗ ಮಾಡುವ, ವಿಕೃತ ಕೆಲಸ. ಆದರೆ ನಿಮ್ಮ ಅಂಚುವಿನ ಅಮೃತಾ, ದೂರ ಸರಿದರು ವಿನ ನಾಯಕಿ, ದಾಟುವಿನ ಸತ್ಯ ಇಲ್ಲಿ ಬೇರೆ ಬೇರೆ ಘಟ್ಟಗಳಲ್ಲಿ ನಾಯಕಿಯಾಗಿ ಕಾಣುತ್ತಾರೆ, ನಾಯಕ ನು ನಿರಾಕರಣ, ತಂತು, ನೆಲೆ ಯವನೇ ಹಿನ್ನೆಲೆಯ ಕಥಾ ಭಿತ್ತಿ ಮಾತ್ರ ಹೊಸದು. ಅರ್ಥರ್ ಸಿ ಕಾರ್ಕನ ಮಾದರಿಯ ಮೈ ನವಿರೇಳಿಸುವ ವೈಜ್ನಾನಿಕ ಕಥೆಯ ಹುಡುಕಿ ಹೊರಟವರಿಗೆ ಮಾತ್ರ ನಿರಾಶೆ ಕಟ್ಟಿಟ್ಟ ಬುತ್ತಿ. ಎಂದಿನ ಭೈರಪ್ಪರಾಗಿ ಮನುಷ್ಯನ ಅಂತರ್ಮುಖತೆ, ಪ್ರಜ್ನಾ ಪ್ರವಾಹದ ತಂತ್ರ ಬಳಕೆಯಾಗಿದೆ; ಕಾಲವು ಉಯ್ಯಾಲೆಯಂತೆ ಭೂತದಿಂದ ವರ್ತಮಾನಕ್ಕೂ ಮತ್ತೆ ಭೂತಕ್ಕೂ ತುಯ್ಯುತ್ತದೆ. ಸಂಧಿಗ್ದಗಳು ,ಅಂತರ್ಮಥನಗಳು ಅವೇ ,ರೀತಿ ಬೇರೆ.
ಇವೆಲ್ಲಾ ಮೊದಲ ಓದಿಗೆ ದಕ್ಕಿದವು. ತಾಳ್ಮೆಯಿಂದ ಸವಿಯುತ್ತಾ ಇನ್ನೊಮ್ಮೆ ಓದಿದರೆ ( ಅಲ್ಲಿ ಆತುರವಿಲ್ಲ, ನಾಲಿಗೆಯಲ್ಲಿ ಕರಗಿದ ಚಾಕಲೇಟ್ ಉಲಿಸಿಹೋದ ಸ್ವಾದದ ಸಿಹಿ ನೆನಪು)_ ಬಹುಶ ಇನ್ನಷ್ಟು ದಕ್ಕಬಹುದು.
ಆದರೂ ನಿಮ್ಮ ದೊಡ್ಡ ಅಭಿಮಾನಿಯಾಗಿದ್ದರೂ ಕವಲು ವಿನಲ್ಲಿ ಹ್ಯಾಪ್ಪಿ ಎಂಡಿಂಗ್ ಮತ್ತು ಮಹಿಳೆಯರನ್ನ ತೀರಾ ಕೆಟ್ಟದಾಗಿ ಚಿತ್ರಿಸಿದ್ದು ಸರಿ ಕಂಡಿರಲಿಲ್ಲ, ನಿಮ್ಮ ಇತ್ತೀಚಿನ ಕೃತಿಗಳಲ್ಲಿ ನೀವು ಪುರುಷ ಪಕ್ಷಪಾತಿಯೋ ಎಂಬ ಅನುಮಾನ ,ಗೊಂದಲಗಳು ಕಾಡುತ್ತವೆ. ಇವೆಲ್ಲಾ ಚಿಲ್ಲರೆ ಸಂಗತಿಗಳು. ಒಂದೊಳ್ಳೆಯ ಪುಸ್ತಕ ಓದಿದ ಮೇಲೂ ಕಾಡುತ್ತದೆ. ಆ ಅನುಭವಕ್ಕಂತೂ ಮೋಸವಿಲ್ಲ. ನಮಸ್ಕಾರ.
Saturday, July 26, 2014
ಬರೆಯಲಾರದ ಕಷ್ಟ
ಬಸ್ಸಲ್ಲಿ ಹೀಗೆ ಕಿಟಕಿಗೆ ತಲೆಯಾನಿಸಿಕೊಂಡು ಹೊರಗೆ ನೋಡುತ್ತಾ ನಿದ್ದೆಗೆ ಜಾರುವಾಗ ಎಂದೂ ಬರೆಯಲಾಗದ ಕತೆಯ ಸಾಲುಗಳು ಒತ್ತರಿಸಿ ಬರುತ್ತವೆ. ಅದನ್ನೇ ಟೈಪಿಸಲೋ ಬರೆಯಲೋ ಹೊರಟರೆ ದಿಕ್ಕಾಪಾಲಾಗಿ ಓಡುತ್ತವೆ. ಬಹುಶಃ ಅದು ಬೇಡುವ ಅನುಭವದ ದ್ರವ್ಯಕ್ಕೂ, ತಾಳ್ಮೆಗೂ ನಾನಿನ್ನೂ ಬಲಿತಿಲ್ಲ ಅಂತ ಸುಳ್ಳೇ ಸಮಾಧಾನ!
ನೆನಪು ಹಿಂಜಿ ಹತ್ತಿಯಂತೆ ತೆಳುವಾದರೂ ಮತ್ತೆ ಮತ್ತೆ ಅದೇ ಓಣಿಗಳಲ್ಲಿ ನುಗ್ಗುವ ಮನಸಿನ ಧಾವಂತದ ಅರ್ಥವೇನು ಅಂತ ಗೊತ್ತಿಲ್ಲ. ' ನಾನು ಚಿಕ್ಕೋನಿದ್ದಾಗ ' ಅಂತ ಶುರುವಾಗುವ ಎಲ್ಲ ಕತೆಗಳೂ ಮತ್ತದೇ ಕ್ಲೀಷೆಯಾಗಿ ಹೇಳುವವನಿಗೇ ಬೇಸರವಾಗಿಬಿಡುತ್ತದೆ. ಹೊಸ ಅನುಭವಗಳಿಗೆ ತೆರೆದುಕೊಳ್ಳಲು 'ಕಂಫರ್ಟ್ ಝೋನ್' ಬಿಟ್ಟು ಬರುವ, ಉದಾಸೀನದ ಮೂಟೆಯ ಇಳಿಸುವ ಅನಿವಾರ್ಯತೆ ಇರುವ ಕಾರಣ ಅದು ರಿಸ್ಕ್.
ಹೀಗೆ ಯಾವತ್ತಾದರು ಲಹರಿಯ ಗುಂಗಲ್ಲಿ ಬಂದಷ್ಟು ಬರೆದರೆ ಬರೆಯಲು ಸುಲಭದಲ್ಲಿ ಸಿಕ್ಕಿದರೇ ಅದೇ ಪುಣ್ಯ, ನಡು ನಡುವೆ ಈಗಿನ ಗೀಚುವಿಕೆ ಮುಂದೆಂದೋ ಯಾಕಪ್ಪಾ ಬರೆದೆ ಎಂಬ ಹಳಹಳಕೆಯಾಗಬಾರದು ಅಂತಲೇ ಡಿಲೀಟಾಗಿ ಹೋಗುತ್ತೆ.
ಒಂದಿಷ್ಟು ಹಾರ್ಮೋನುಗಳ ಆಟಾಟೋಪಕ್ಕೆ ಏನೆಲ್ಲ ಸಹಿಸಬೇಕು ಅಂದರೇ ದಿಗಿಲಾಗುತ್ತೆ!
Wednesday, July 16, 2014
ಅನುವಾದಗಳ ಕತೆ!
ಇನ್ನು , ಮಾಹಿತಿಯ ಬಗ್ಗೆ ನಮಗೆ ಜಗತ್ತಿನ ಅದ್ಭುತ ಕೃತಿಗಳನ್ನೆಲ್ಲ ಅವವೇ ಭಾಷೆಯಲ್ಲಿ ಓದುವುದು ಕಷ್ಟವೇ; ಹಾಗಂತ ಕನ್ನಡ ಅನುವಾದಗಳ ಮಾಹಿತಿಯೂ ಇರುವುದಿಲ್ಲ, (ಹೊಸತು ಅಂತ ಒಂದು ಪೇಪರ್ ಬರುತ್ತೆ ಆದರೆ ಅದರ ವಿಸ್ತಾರ ಅಷ್ಟಾಗಿಲ್ಲ) ನನಗೀಗಲೂ
ನೆನಪಿದೆ. ಕೆಲ ವರ್ಷಗಳ ಹಿಂದೆ ಯಾವುದೋ ಪುಸ್ತಕ ಪ್ರದರ್ಶನದಲ್ಲಿ ಯಾವುದೋ ಪುಸ್ತಕ ಹುಡುಕುತ್ತಿದ್ದವನಿಗೆ ಅಕಸ್ಮಾತ್ ಎಂಬಂತೆ ಪ್ರಸನ್ನ ಅವರ ಮಾರ್ಕ್ವೇಝ್ ಕಾದಂಬರಿ ವನ್ ಹಂಡ್ರೆಡ್ ಇಯರ್ಸ್ ಆಫ಼್ ಸಾಲಿಟ್ಯೂಡ್ ನ ಅನುವಾದ ಒಂದು ನೂರು ವರ್ಷಗಳ ಏಕಾಂತ ಕಣ್ಣಿಗೆ ಬಿದ್ದು ಆದ ಖುಷಿ(ಅದನ್ನ ಇಂಗ್ಲೀಷಲ್ಲಿ ಓದಿ ಆಗ ನಾನ್ಯಾಕೆ ಖುಷಿ ಪಟ್ಟೆ ಅಂತ ಅರ್ಥ ಆಗುತ್ತೆ) .ಹಾಗೆ ಪ್ರೈಡ್ ಯಂಡ್ ಪ್ರಿಜ್ಯುಡೀಸ್ ದೇಜಗೌ ಅವರು ಹಮ್ಮು ಬಿಮ್ಮು ಅಂತ, ಕ್ರಾನಿಕಲ್ಸ್ ಆಫ಼್ ಎ ಡೆತ್ ಫ಼ೋರ್ ಟೋಲ್ಡ್ ಎಲ್.ಎಸ್. ಶೇಷಗಿರಿರಾಯರು ಒಂದು ಸಾವಿನ ವೃತ್ತಾಂತ ಅಂತ, ಲವ್ ಇನ್ ದ ಟೈಮ್ ಆಫ಼್ ಕಾಲರಾ ವನ್ನ ರವಿ ಬೆಳಗೆರೆ ಮಾಂಡೋವಿ ಅಂತ, ಓ.ಎಲ್.ನಾಗಭೂಷಣ ಸ್ವಾಮಿಯವರು ವಾರ್ ಯಾಂಡ್ ಪೀಸ್ ಅನ್ನು ಯುದ್ಧ ಮತ್ತು ಶಾಂತಿ ಅಂತ, ಥೆ ಗಾಡ್ ಫ಼ಾದರ್ ಅನ್ನು ಎಮ್.ವಿ.ನಾಗರಾಜ ರಾವ್ ಮತ್ತು ರವಿ ಬೆಳಗೆರೆ ಅದೇ ಹೆಸರಲ್ಲಿ ಕನ್ನಡಕ್ಕೆ ತಂದಿದ್ದಾರೆ ಅಂತ, ಗಾನ್ ವಿತ್ ದ ವಿಂಡ್, ಗುಡ್ ಅರ್ತ್ ,ಓಲ್ಡ್ ಮ್ಯಾನ್ ಯಾಂಡ್ ಸೀ,ಅನ್ನಾ ಕರೇನಿನಾ ದ ಟ್ರಯಲ್, ಮೆಟಾಮೊರ್ಫ಼ೋಸಿಸ್ ಹೀಗೆ ಜಗತ್ತಿನ ಅತ್ಯುತ್ತಮ ಕೃತಿಗಳೆಲ್ಲಾ ಈಗಾಗಲೇ ಕನ್ನಡಕ್ಕೆ ಬಂದಿವೆ. ಕೆಲವು ಮೂಲವನ್ನ ಮೀರಿಸಿವೆ.ಕೆಲವು ಹಳಿ ತಪ್ಪಿವೆ. ಆದರೆ ಸವಿಯ ಸವಿಯಲು ಇಷ್ಟು ಸಾಕಲ್ಲ!
ನಿನ್ನೆ ಹೀಗೇ ಜ್ಯೋತಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ ತಡಕಾಡುತ್ತಿದ್ದಾಗ, ಹಠಾತ್ತಾಗಿ ಫ಼್ರೆಡ್ ರಿಕ್ ಫ಼ೋರಿಸ್ಯ್ತ್ ನ ಡೆ ಆಫ಼್ ಜಾಕಲ್ ನ ಕನ್ನಡ ಅನುವಾದ 'ಅವನದೇ ಆ ದಿನ' ಕಣ್ಣಿಗೆ ಬಿದ್ದು ಹೀಗೆಲ್ಲಾ ಅನಿಸಿತು!
Friday, June 6, 2014
ಅವಸ್ಥೆ
ನಮ್ಮ ಪಾಡಿಗೆ ನಾವು
ಅದೇ ವೃತ್ತದ ಪರಿಧಿಯಲ್ಲಿ;
ಬೆಳಗ್ಗೆ ಅಲರಾಮ್ ಸದ್ದು,
ದೋಸೆಯ ಚುಯ್;
ಮಕ್ಕಳ ಶಾಲೆಯ ವ್ಯಾನು,
ಹೊತ್ತೇರಿದಂತೆ
ಮಧ್ಯಾಹ್ನದ ಅಡಿಗೆಯ ಚಿಂತೆ,
ಊಟವಾದ ಮೇಲೆ ಕೋಳಿ ನಿದ್ದೆ;
ಸಂಜೆಯ ಚಾ,
ರಾತ್ರಿಯ ಸೀರಿಯಲ್ಲು,
ಎಣಿಸಿ ತಪ್ಪಿದ ಸೆಕ್ಸು,
ಆಮೇಲಿನ ಮಂಪರು
ಎಲ್ಲ ದಿನ ಹೀಗೇ ಅಲ್ಲ:
ಯಾವುದೋ ಹಾಡು
ಎದ್ದಾಗಿಂದ ಕಾಡಿ,
ನೆನಪು ಸುರುಳಿಯಾಗಿ ಅಂಗಾತ ಬಿದ್ದು,
ಪಲ್ಲವಿಯೇ ಸಾಲಾಗಿ
ದಾರಿ ತಪ್ಪಿದ ದೈನೇಸಿ;
ಇದೆಲ್ಲದರ ಅರ್ಥವೇನು?
ಕೊಂಚ ಚಿಂತೆ
ಉತ್ತರ ಹೊಳೆಯುವ ಮೊದಲೇ
ಮತ್ತೆ ಓಟ,
ತಂಪಾದ ಕ್ಷಣಗಳ ಆಯುಸ್ಸು
ತುಂಬಾ ಕಮ್ಮಿ!
Sunday, April 20, 2014
ಎರಡು ಹುಚ್ಚಿನ ಕುರಿತು...
ಸಿನಿಮಾ ನೋಡೋದು ಮಂಗಳೂರಿನಲ್ಲಿ ಕಲಿಕೆಗೆ ಬಂದ ಮೇಲೆ ಶುರುವಾದದ್ದಾದರೆ ,ಪುಸ್ತಕ ಓದೋದು ತುಂಬಾ ಹಿಂದೆ ನನ್ನೂರಲ್ಲಿ ಒಳ್ಳೆ ಶಾಲೆ ಇಲ್ಲಾ ಅಂತ ನನ್ನನ್ನೂ ತಂಗಿಯನ್ನೂ ಬಿ.ಸಿ.ರೋಡಲ್ಲಿ ದೊಡ್ಡಪ್ಪನ ಮನೆಯಲ್ಲಿ ಸೇರಿಸಿದಾಗಿಂದ ಅಂಟಿಕೊಂಡದ್ದು!
ನನಗೀಗಲೂ ನೆನಪಿದೆ; ಪ್ರತೀ ಶನಿವಾರ ನನ್ನನ್ನೂ ತಂಗಿಯನ್ನೂ ಅಪ್ಪ ಊರಿಗೆ ಕರಕೊಂಡು ಹೋಗಿ ಸೋಮವಾರ ಬೆಳಿಗ್ಗೆ ವಾಪಸ್ ತಂದು ಬಿಡುತ್ತಿದ್ದರು. ಒಂದು ಸಲ ಅಪ್ಪನ ಬದಲು ನನ್ನಣ್ಣ ಪ್ರದೀಪ ,ದೇರಳಕಟ್ಟೆಯಲ್ಲಿ ಡೆಂಟಲ್ ಕಾಲೇಜ್ ನಲ್ಲಿ ಓದುತ್ತಿದ್ದವ ಕರಕೊಂಡು ಹೋಗಲು ಬಂದಿದ್ದವ, ನನ್ನ ಮಾತಿನ ರಭಸ ತಾಳಲಾರದೆ 'ಬಾಲ ಮಂಗಳ' ವೊಂದನ್ನು ತೆಗೆದುಕೊಟ್ಟು "ಇನ್ನು ಮನೆ ಸೇರುವವರೆಗೂ ಮಾತಾಡಬಾರದು" ಎಂದು ತಾಕೀತು ಮಾಡಿದ್ದ! ಅವತ್ತು ಸಿಕ್ಕಿದ ಅಕ್ಷಯ ನಿಧಿ ಆಮೇಲಾಮೇಲೆ ದೊಡ್ಡಪ್ಪನ ಮನೆಯಲ್ಲಿ ಬರುತ್ತಿದ್ದ ತರಂಗ, ಅಕ್ಕ ಓದುತ್ತಿದ್ದ 'ಚಿಂತನ' ಲೈಬ್ರರಿಯ ಕಾದಂಬರಿಗಳು( ಅವನ್ನು ನಾನು ಕದ್ದು ಓದುತ್ತಿದ್ದೆ) ಹೀಗೆ ಬೆಳೆಯಿತು.ವಾರಕ್ಕೊಮ್ಮೆ ಮನೆಗೆ ಹೋಗುವಾಗ ಅಪ್ಪನ ಪೀಡಿಸಿ ಬಾಲಮಂಗಳ,ಚಂದಮಾಮ,ಬಾಲಮಿತ್ರ,ಚಂಪಕ ಹೀಗೆ ಕೈಗೆ ಸಿಕ್ಕಿದ್ದೆಲ್ಲ ಓದುವುದೇ...ಅಜ್ಜನ ಅಟ್ಟದ ಮೇಲೆ ಜೋಪಾನವಗಿಟ್ಟ ೬೪ ವಿದ್ಯೆಗಳ ಪುಸ್ತಕದಲ್ಲಿ ಸಮ್ಮೋಹನ ವಿದ್ಯೆ ಓದಿ ಏಕ ಬಿಂದುವಲ್ಲಿ ದಿಟ್ಟಿ ನೆಟ್ಟೂ ಕೂತದ್ದು, ಶಕ್ತಿಮದ್ದು ಅಂತ ಸಿಕ್ಕಿದ ಸೊಪ್ಪು ಅರೆದು ಬಾವ ನವನೀತ ಮತ್ತು ತಂಗಿಯ ಜೊತೆ ಸೇರಿ ನವನೀತನ ತಂಗಿ ನಮಿತಳಿಗೆ ಕುಡಿಸಲು ಹೊರಟು ಅತ್ತೆಯ ಕೈಯಲ್ಲಿ ಬೈಗಳು ತಿಂದು ಆಮೇಲೆ 'ಟೆಸ್ಟ್' ಮಾಡಲು ಅದನ್ನ ಮನೆ ನಾಯಿಗೆ ಕುಡಿಸಿದ್ದು, ಹೀಗೆ ಓದು ಎಂಬುದು ಪಠ್ಯಪುಸ್ತಕಗಳ ಹೊರತಾಗಿ ಗಾಳ ಹಾಕಿದಂತೆಲ್ಲಾ ಮೀನು ಸಿಗುವ ಅದೃಷ್ಟದಂತೆ ನನಗೆ ದೊರೆತಿದೆ.. ಈ ಹುಚ್ಚಿಗೆ ಅಕ್ಕ ಸ್ವಾತಿಯ ಓದಿನ ಹುಚ್ಚೂ ಜತೆಗೂಡಿ ಅದು ಓದು ಇದು ಓದು ಎಂಬ ಅವಳ ಸಲಹೆಗಳು ಮಾಡಿದ ಉಪಕಾರ ಅಷ್ಟಿಷ್ಟಲ್ಲ! ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ ನಾನು ಪಿಯುಸಿಗೆ ಸೇರಿದ್ದು ದೊಡ್ಡ ಗ್ರಂಥಾಲಯವಿರುವ ಪುತ್ತೂರಿನ ವಿವೇಕಾನಂದ ಕಾಲೇಜಿಗೆ! ಅದರಲ್ಲೂ ಅಲ್ಲಿ ಆಗ ತಾನೆ ರೀ ಓಪನ್ ಆದ ಹಾಸ್ಟೆಲ್ ಗೆ; ಎಲ್ಲರೂ ಮುಗಿಬಿದ್ದು ಓದಿ ಒಳ್ಳೆಯ ಭವಿಷ್ಯಕ್ಕೋಸ್ಕರ ಅಂತ ಲೆಕ್ಚರರ್ ಗಳು ಊದಿದ ಶಂಖ ನನ್ನ ಮಂಡೆಗೇ ಹೋಗಲಿಲ್ಲ, ಸದಾ ಅಪ್ಪನ ಭಾಷೆಯಲ್ಲಿ 'ಕಥೆ ಪುಸ್ತಕ' ಅಂತ ನಿಕೃಷ್ಟವಾಗಿ ಕರೆಯಲ್ಪಡುವ ಪುಸ್ತಕಗಳ ಕಪಾಟಿನ ಮಧ್ಯೆಯೇ ಇರುತ್ತಿದ್ದೆ. ಎಷ್ಟೆಲ್ಲಾ ಓದಿದೆ ಅಂತ ನೆನೆಸಿಕೊಂಡರೆ ಖುಷಿಯಾಗುತ್ತದೆ; ಭವಿಷ್ಯ ಹಾಳಾಯಿತ ಅಂತ ಕೇಳಿದರೆ ಇನ್ನೂ ಉತ್ತರ ಸಿಕ್ಕಿಲ್ಲ!
ಮಂಗಳೂರಲ್ಲಿ ಬಂದ ಮೇಲೆ ನಾನೇ ರಾಜ,ನಾಲ್ಕು ನಾಲ್ಕು ಲೈಬ್ರರಿಗಳ ಸದಸ್ಯನಾಗಿ 'ಒಂಥರಾ ಹುಚ್ಚು ಹಿಡಿವಷ್ಟು '(ಖಂಡಿತಾ ಪಠ್ಯ ಅಲ್ಲ).. ಈಗ ಬಿಡಿ ಕೆಲಸಕ್ಕೆ ಹೋಗಲು ಶುರುವಾದ ಮೇಲೆ, ತಿಂಗಳು ತಿಂಗಳು ಏನಾದರು ಪುಸ್ತಕ ತರದಿದ್ದರೆ ಕಳಕೊಂಡ ಅನುಭವ, ಗಿಫ಼್ಟ್ ಏನು ಬೇಕು ಅಂತ ಯಾರಾದರು ಕೇಳಿದರೆ ಪುಸ್ತಕ ಅನ್ನುವುದೇ ಸಿದ್ದ ಉತ್ತರ, ಆದರೂ ಈಗೀಗ ಕೈಗೆ ಸಿಕ್ಕಿದ್ದೆಲ್ಲಾ ಓದಲಾಗುತ್ತಿಲ್ಲ, ಕೆಲವೆಲ್ಲಾ 'ಇಶ್ಶೀ' ಅನಿಸಿದರೆ ಕೆಲವೆಲ್ಲಾ ಬೋರು..ವಯಸ್ಸಾದಂತೆ ಹೀಗೂ ಆಗುತ್ತೇನೋ!
ಇನ್ನು ಸಿನಿಮಾ ಬಗ್ಗೆ, ಕಲಿಯಲೆಂದು ಬಂದವ ಹತ್ತಿ ಇಳಿಯದ ಥಿಯೇಟರಿಲ್ಲ, ೭ ಗಂಟೆಯ ಸಿನಿಮಾಕ್ಕೆ ಹೋಗುವುದ ವಾಪಸ್ ಕೆಲವೊಮ್ಮೆ ಬಸ್ ಇರದಾಗ ನಡಕೊಂಡು ಬರೋದು ಒಂಥರಾ ಖುಷಿ ಆದರೆ ನಾಳೆ ಹೇಗೋ ಈಗ ಹೀಗೆ ಮಾಡಿದರೆ ಅಂತ ಭಯವಾಗುತ್ತಿದುದೂ ಸುಳ್ಳಲ್ಲ; ಒಮ್ಮೆ ಹೀಗಾಯ್ತು,ಯಾವನೂ ಬರಲಿಲ್ಲ ಅಂತ ಒಬ್ಬನೇ ಸಿನಿಮಾಕ್ಕೆ ಹೋಗಿದ್ದೆ.ಬೆಳಕೆಲ್ಲ ಆರಿ ಸಿನಿಮಾ ಶುರುವಾದ ಕೂಡಲೆ ಅನಾಥ ಪ್ರಜ್ನೆ ಕಾಡತೊಡಗಿತು,ಇಡೀ ಜಗತ್ತಲ್ಲಿ ನಾನೊಬ್ಬನೇ ದುಃಖಿ, ಮತ್ತೆಲ್ಲಾ ಎಷ್ಟು ಸುಖವಾಗಿದ್ದಾರೆ ಎಂಬ ತಬ್ಬಲಿತನ! ಗೊಳೋ ಎಂದು ಅಳಬೇಕು ಅನಿಸುವಷ್ಟು ಬೇಜಾರಾಗಿತ್ತು ಅದನ್ನೇ ಗೆಳೆಯನ ಬಳಿ ಹೇಳಿಕೊಂಡಾಗ " ಒಬ್ಬನೇ ಸಿನಿಮಾಗೆ ಮತ್ತು ಒಬ್ಬನೇ ಕುಡಿಯಲು ಬಾರ್ ಗೆ ಹೋಗಲೇಬಾರದು" ಅಂತ ಉಪದೇಶ ಕೊಟ್ಟ ಪುಣ್ಯಾತ್ಮ! ಹಾಗೆ ಓದು ಮುಗಿದು ಕೆಲಸಕ್ಕೆ ಸೇರಿದ ಮೇಲಂತೂ ರಾಶಿ ರಾಶಿ ಸಿನಿಮಾ ನೋಡಿದೆ.ಡೌನ್ ಲೋಡ್ ಮಾಡುದು ನೋಡೂದು , ಅದರಲ್ಲೂ 'ದ ಗಾಡ್ ಫ಼ಾದರ್' ಸಿನಿಮಾ ಹುಚ್ಚು ಎಷ್ಟರ ಮಟ್ಟಿಗೆ ಅಂದರೆ ಸಿನಿಮಾ ನೋಡಿ ಅದರ ಅನುವಾದಿತ ಪುಸ್ತಕ ಓದಿ ,ಮೂಲವೂ ಓದಿ ಇನ್ನೂ ತಣಿಯದೆ ಆ ಕಂಪ್ಯೂಟರ್ ಗೇಮನ್ನೂ ಖರೀದಿಸಿ ಮನದಣಿಯೆ ಆಡಿ ಮನೆಯವರ ಕೈಯಲ್ಲಿ,ರೂಮ್ ಮೇಟುಗಳ ಕೈಲಿ ಬೈಗುಳ ತಿಂದೌ, ಅಬ್ಬಬ್ಬಾ... ಈಗಲೂ ಮನೆಯಲ್ಲಿ ಯಾರಿಲ್ಲ ಅಂದರೆ ನಾಲ್ಕಾರು ಗ್ಯಾಂಗ್ ಸ್ಟರ್ ಗಳ ಕೊಲ್ಲುವ ಅಂತ ಆಡಲು ಸುರುವೇ!
ನಿನಗ್ಯಾವುದು ಇಷ್ಟ ಅಂತ ಯಾರದರು ಕೇಳಿದರೆ ನನ್ನ ಆಯ್ಕೆ ಪುಸ್ತಕವೇ.. ಅಲ್ಲಿ ನನಗೆ ಬೇಕಾದ ಏಕಾಣ್ತವಿದೆ,ಯಾರನ್ನೂ ತೃಪ್ತಿಪಡಿಸಬೇಕಾದ ಅನಿವಾರ್ಯತೆ ಇಲ್ಲ, ಜೊತೆಗೆ ಕರಕೊಂಡು ಹೋದವನ ಅಭಿಪ್ರಯದ ಮೇಲೆ ನಮ್ಮ ಅಭಿಪ್ರಾಯವೂ ಬದಲಾಗುವ ಭಯವಿಲ್ಲ! ಎಲ್ಲದಕ್ಕಿಂತ ಮುಖ್ಯ ಕಲ್ಪನೆಗೆ ಜಾಗವಿದೆ!
ಸದ್ಯಕ್ಕಂತೂ ಎರಡು ಹುಚ್ಚುಗಳಿಂದ ಬಿಡುಗಡೆಯಿಲ್ಲ; ಮುಂದೆ ಸಿಗಬಹುದೆಂಬ ನಿರೀಕ್ಷೆಯೂ ಇಲ್ಲ!
Thursday, November 14, 2013
ಅವರ ಪ್ರಶ್ನೆ ಮತ್ತು ನನ್ನ ಉತ್ತರ
೩. ಕೊನೆಯ ಪುಟ ತಿರುಗಿಸಿದಾಗ 'ಛೇ, ಮುಗಿದೇ ಹೋಯ್ತಲ್ಲಾ ಅನ್ನಿಸಿದಾಗ'
೪. ೪೦ ಪುಟಗಳಾದರೂ ಕಷ್ಟಪಟ್ಟು ಮುಂದುವರೆಸಬೇಕಾಗಿ ಬಂದಾಗ...
೫. ಯಾರೋ ಹೇಳಿ ಅಥವಾ ಒಳ್ಳೆ ಸಾಹಿತ್ಯ ಅಂತ ರಿವ್ಯೂ ಬಂದಿದೆ ಅಂತ ದುಡ್ಡು ಕೊಟ್ಟು ತಂದರೂ ಅದರಲ್ಲಿದ್ದದ್ದು ಮೆದುಳಿಗೆ ಹತ್ತದಾಗ
೬. ಇಷ್ಟಪಟ್ಟಲ್ಲದೆ , ಕಷ್ಟಪಟ್ಟು ಓದಬೇಕಾಗಿ ಬಂದಾಗ
೭.ಕಣ್ಣಿಗೆ ಕಟ್ಟಿದ ಪಾತ್ರ ಚಿತ್ರಣ ಮತ್ತು ಸಹಜವೆನಿಸುವ ಸುಲಲಿತ ಶೈಲಿ ಇದ್ದಾಗ
೮.ಎರಡನೇ ಸಲ ಓದಲು ತೆಗೆದಾಗ ಖುಷಿಕೊಡುವುದು ಒಳ್ಳೆಯ ಪುಸ್ತಕ, ಲೈಬ್ರರಿಯಿಂದ ಕಡ ತಂದರೆ ಆಗುತ್ತಿತ್ತು ಎನ್ನುವುದು ಮಧ್ಯಮ, ಯಾಕಪ್ಪಾ ಇಲ್ಲಿ ಸಿಕ್ಕಿಬಿದ್ದೆ ಅನಿಸುವುದು ಅಧಮ!
೯.ಖಂಡಿತಾ ೧:೧..ಇಲ್ಲವಾದರೆ ಉಪಯೋಗವೇನು?
೧೦.ಕೆಲವೊಮ್ಮೆ.ಅದರಲ್ಲೂ ಇಂಗ್ಲೀಷ್ ಪುಸ್ತಕ ನೋಡುವಾಗ
೧೧.ಇಷ್ಟವಾದದ್ದು ಸಂಗ್ರಹಯೋಗ್ಯ ಅಂತ ಹಟ ಹಿಡಿಯುವ ಮನಸಿದ್ದರೆ ಮನೇಲೇ ಲೈಬ್ರರಿ
೧೨.ತುಂಬಾ ಇದೆ..ನಾನು ಹೋದ ಪುತ್ತೂರು ವಿವೇಕಾನಂದ ಕಾಲೇಜಿನ ಲೈಬ್ರರಿ, ವಿಟ್ಲ, ಮಂಗಳೂರು,ಹಾಸನ,ಸುರತ್ಕಲ್ ನ ಸರಕಾರಿ ಲೈಬ್ರರಿಗಳಲ್ಲಿ ನಾನು ಯಾವುದು ಅಮೂಲ್ಯ ಅಂತ ತಿಳಿದ ಪುಸ್ತಕಗಳು ಓದುವವರಿಲ್ಲದೆ ಧೂಳು ಹಿಡಿದು ಕೊನೆಗೊಂದು ದಿನ ಗೋಣಿ ಚೀಲದೊಳಗೆ ರದ್ದಿ ಅಂಗಡಿಗೆ ಹೋಗುವುದು ನೋಡುವಾಗ ಬೇಸರವಾಗುತ್ತದೆ.
೧೩.ಮ್ಯಾಗಜಿನ್ಸ್ ಓದಲು ೧-೨ ಗಂಟೆ ಸಾಕು..ಆದರೆ ಪುಸ್ತಕ ಓದುವ ಮಜವೇ ಬೇರೆ!
೧೪.ಇಲ್ಲ.ಮೊದಲು ಬರೇ ಕಾದಂಬರಿ ಓದುತ್ತಿದ್ದ ನನಗೆ ಈಗ ಆತ್ಮಕಥೆ,ವಿಮರ್ಶಾ ಬರಹಗಳ ರುಚಿ ಹತ್ತಿದೆ..ಕವಿತೆ ಕಬ್ಬಿಣದ ಕಡಲೆ.
೧೫. ಲೇಖಕರು,ವಸ್ತು
೧೬.ಈಗೀಗ ಒಂದು ಸಲಕ್ಕೆ ಒಬ್ಬ ಲೇಖಕನ ಎಲ್ಲಾ ಪುಸ್ತಕ ಮುಗಿಸುವ ಪರಿಪಾಠ...ಕನ್ನಡದಲ್ಲಿ ಮಹತ್ವದ ಲೇಖಕರನ್ನ ಚಿಕ್ಕದಿಂದ ಓದಿದ ಕಾರಣ ಈಗ ಪಟ್ಟು ಹಿಡಿದು ಇಂಗ್ಲೀಷ್ ಓದುವುದು..ಆದರೂ ಹೊಸ ಪುಸ್ತಕ ಬಂದರೆ ಮೊದಲ ಆದ್ಯತೆ ಅದಕ್ಕೇ!
೧೭.ಒಂದೊಂದು ಪ್ರಕಾರಕ್ಕೆ ಅದರ ಸ್ಥಾನ.ಆದರೆ ಹುಡುಕಾಡುವ ಖುಷಿಯೇ ಬೇರೆ!
೧೮.ನನ್ನ ಬಳಿಯ ಎಲ್ಲಾ ಕನ್ನಡ ಪುಸ್ತಕ ಮುಗಿಸಿದ್ದೇನೆ.ಓದಲಸಾಧ್ಯ ಅನ್ನುವ ಪುಸ್ತಕಗಳು ಇಂಗ್ಲೀಷ್ ನ ಕೆಲವಿವೆ..ಈಗ ಅದೇ ಡೆಡ್ ಲೈನ್ ಮುಗಿಸುವ ಆತುರ.
೧೯.ಹೊಸ ಪುಸ್ತಕ ಕೊಂಡ ಕೂಡಲೆ ಓದ ಹೊರಡುವುದರಿಂದ ಅಂತಹ ಪ್ರಶ್ನೆ ಬರುವುದಿಲ್ಲ.
೨೦.ಎಲ್ಲದಕ್ಕೂ ಅದರ ಸಮಯ ಕೊಟ್ಟರೆ ಮಾತ್ರ ನಿರಾತಂಕದ ಓದು ಸಾಧ್ಯ!
೨೧.ಅಲ್ಲ.ಅದು ಖುಷಿ.
೨೨.ಕನ್ನಡವಾದರೆ ೧೫-೧೬ ಇಂಗ್ಲೀಷ್ ಆದರೆ ೪-೫
೨೩.ಖುಷಿ ಕೊಡುತ್ತದೆ... ನನ್ನದೇ ಲೋಕದಲ್ಲಿ ವಿಹರಿಸುವ ಆಹ್ಲಾದ.
೨೪.ಸಾಧ್ಯವಾದರೆ ಬ್ಲಾಗ್ ನಲ್ಲಿ ಬರೆಯುತ್ತೇನೆ.ಇಲ್ಲ ಅದೇ ಪುಸ್ತಕದ ಬಗ್ಗೆ ವಸ್ತುವಿನ ಬಗ್ಗೆ ಹುಡುಕುತ್ತೇನೆ.ಮುಂದಿನ ಪುಸ್ತಕದ ಕಡೆ ಹೋಗುತ್ತೇನೆ.
Wednesday, September 18, 2013
into the wild ಮತ್ತು ನಿಜದ ಪೊಳ್ಳು
ಬೆಸ್ಟ್ ಸೆಲ್ಲರ್ ಥ್ರಿಲ್ಲರ್ಗಳ ನಂತರವೇನಾದರು ಸಾವಧಾನದ ಕತೆಗೆ ಮರಳಿದರೆ ಮನಸು ಪುಟ ಹಾರಿಸುತ್ತದೆ. ಅಬ್ದುಲ್ ರಶೀದರ ಬರಹವೊಂದನ್ನ ಪಟ್ಟಾಗಿ ಓದಕೂತಾಗಲೇ ಇದರಲ್ಲಿ ಅಡ್ರಿನಾಲಿನ್ ರಶ್ ಇಲ್ಲವೆನಿಸಿ ಪಿಚ್ಚೆನಿಸಿತು. ಕಮಟು ವಾಸನೆಯ axe ಮೂಸಿ ಅಭ್ಯಾಸವಾದವರಿಗೆ ಮಲ್ಲಿಗೆ ವಾಸನೆಯೇ!!
ಹಾಗೆ ಲಂಗುಲಗಾಮಿಲ್ಲದೆ ಅಲೆಯುತ್ತಿದ್ದಾಗಲೇ ಬಹಳದಿನಗಳಿಂದ ನೋಡಬಯಸಿದರೂ ಸತ್ಯ ಇದುರಿಸಲು ಹೆದರಿ ಅಥವಾ ಆಫ್ಟರ್ ಇಫೆಕ್ಟಿಗೋ , ಫೋಲ್ಡರ್ ಗಳೊಳಗೆ ಅವಿತಿದ್ದ into the wild ಶುರುಮಾಡಿದೆ.ಒಂಥರಾ ಭವಬಂಧಗಳ ಕಳಚುತ್ತಾ ಹಣ , ಕ್ರೆಡಿಟ್ ಕಾರ್ಡ್ ಎಲ್ಲಾ ಸುಟ್ಟು ಕೊರೆವ ಚಳಿಯಲ್ಲಿ ಸುಳ್ಳು ಬದುಕಿನ ಸುಳ್ಳನ್ನು ತೊರೆದು ಹೋಗುವ ಮೆಕೆಂಡ್ಲಿಸ್ ನ ಕತೆ.ನಿಜವಾದ ಘಟನೆ.
ಯಾಕೋ ಗೊತ್ತಿಲ್ಲ ಈ ಚಿತ್ರ ಚೆನ್ನಾಗಿದ್ದರೂ ನನ್ನೊಳಗೆ ಇಳಿಯಲಿಲ್ಲ.ಕಾರಣ ಗೊತ್ತು ಗುರಿಯಿಲ್ಲದೆ ಒಬ್ಬ ಅಲೆದಾಡಿ ಅನಾಥ ಶವವಾಗುವ ದುರಂತ.ಅಥವಾ ನಮ್ಮ ಸಿನಿಮಾಗಳಂತೆ ಕತೆಗೊಂದು ಹೀರೋ ,ಹೀರೋಯಿನ್ ಬೇಕೇ ಎಂಬ ಮನಸ್ಥಿತಿ. ಸುಮ್ಮನೆ ಹೀಗೆ ಸಾಗಿದರೆ ಗುರಿಯಿಲ್ಲದೆ 'ಇದೆಂಥದ್ದಪ್ಪಾ, ಕರ್ಮ..' ಅನಿಸತೊಡಗಿ ಪಾರಾಗುವ ದಾರಿ ಅರಸುತ್ತದೆ.
ನನಗೆ ಅನಿಸಿದ್ದು ಈತ ಏಕೆ ಹಿಪ್ಪಿ ಸಂಸ್ಕತಿ ಅನುಸರಿಸಿಲ್ಲ ಅಂತ.ಬಹುಶ ಅದರ ಏರುಕಾಲ ಕಳೆದು ಹೋಗಿತ್ತಾದ್ದರಿಂದ ಇರಬಹುದು.
ಏನಾದರೂ ಈ ಚಿತ್ರ ನನ್ನನ್ನ ತುಂಬ ದುಃಖಿತನನ್ನಾಗಿಸಿತು.ನಾವು ನೋಡುವ ಬಹುತೇಕ ಸಿನಿಮಾಗಳಲ್ಲಿ ಎಷ್ಟೇ ಕಷ್ಟ ಬಂದರೂ ಆಮೇಲೆ ಸರಿಯಾಗ್ತದೆ ಬಿಡು ಯಾಕೆಂದರೆ ಅವ ಹೀರೋ ಎಂಬ ಹೋಪ್ ಇರುತ್ತೆ.ಇದರಲ್ಲಿ ಎದುರಿಸಲೇಬೇಕಾದ ಸೋಲು ಸಾವಿನ ರೂಪದಲ್ಲಿ ಕಾದು ಕೂತಿದೆ ಅದೂ ನಮಗೂ ಗೊತ್ತಿದೆ ಅನ್ನುವಾಗಿನ ವಿಷಾದ ಕೊರೆಯುತ್ತದೆ.
ಮರೀಚಿಕೆ ಸುಳ್ಳಾದರೂ ಹಿತವೇ, ಉರಿವ ಸತ್ಯಕಿಂತ!
Monday, September 9, 2013
ಪ್ರೇಮಾ ಕಾರಂತ ಆತ್ಮಕಥನ ' ಸೋಲಿಸಬೇಡ, ಗೆಲಿಸಯ್ಯಾ'
ಇತ್ತೀಚೆಗಷ್ಟೆ ಓದಿ ಮುಗಿಸಿದ ' ಪ್ರೇಮಾ ಕಾರಂತ'ರ ಆತ್ಮಕಥೆ ' ಸೋಲಿಸಬೇಡ ಗೆಲಿಸಯ್ಯಾ' ರೋಮಾಂಚನಕಾರಿ ಪಯಣವಲ್ಲದೆ ಮನಸ ಕೊಳದೊಳಗೆ ಕಲ್ಲೆಸೆದಂತೆ ಅಲೆಗಳೆಬ್ಬಿಸುತ್ತಲೇ ಇತ್ತು.
ತಮ್ ಜೀವನ ಪಯಣದ ಅತ್ಯಂತ ವಿವಾದಾತ್ಮಕ ಘಟನೆಯಾದ ಕಾರಂತ ವಿಭಾ ಮಿಶ್ರ ಪ್ರಕರಣದಿಂದ ಕಥನ ಶುರು ಮಾಡುವ ಪ್ರೇಮಾ ಕಾರಂತರು ಇಡೀ ಪಯಣವನ್ನ ಹಿಮ್ಮುಖ ಮುಮ್ಮುಖವಾಗಿ ಸಾಗಿಸುವ ರೀತಿಯೇ ಅದಭುತ. ತನ್ನ ಓಡಾಟಗಳು, ನಾಟಕಗಳು, ವಿವಾದಗಳು, ಫಣಿಯಮ್ಮ ಚಲನಚಿತ್ರ ಮೂಡಿದ ಬಗೆ, ಸಂಕಷ್ಟದ , ಖುಷಿಯ(?) ಕಾಲ ಹೀಗೆ ವಿವರಗಳು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತಾ ಹೋಗುತ್ತಾರೆ.
ಆದರೆ ಕೆಲ ಪ್ರಶ್ನೆಗಳು ಉದಾಹರಣೆಗೆ ಇಡೀ ಕಥನದಲ್ಲಿ ಎಲ್ಲಿಯೂ ಸಂತಾನದ ಬಗ್ಗೆ, ಆ ಆಸೆಯ ಬಗ್ಗೆ ಹಾಗೆ ನಮ್ಮಂತಹ ಸಾಮಾನ್ಯರಿಗೆ ಮಹತ್ವದ್ದು ಅನಿಸಬಹುದಾದ ಸಂಗತಿಗಳ ಪ್ರಸ್ತಾವವೂ ಆಗುವುದಿಲ್ಲ; ಆ ಮಟ್ಟಿಗೆ ಇದೊಂಥರಾ ಸಾರ್ವಜನಿಕ ಕಥನವಾಗುತ್ತದೆ.
ಇನ್ನು ಅವರ ಆತ್ಮಕಥೆಯಾಗಿರುವುದರಿಂದ ಅವರ ನಿಲುವುಗಳು ಢಾಳಾಗೇ ಕಾಣುತ್ತವೆ ನಮಗೆ ಒಪ್ಪಿಗೆಯಾಗದಿದ್ದರೂ.
ಹಾಗೆಯೇ ಇದು ಆ ಕಾಲದ ಸಾಂಸ್ಕ್ರತಿಕ ಪಲ್ಲಟಗಳ ದಾಖಲೆ ಕೂಡಾ,
ಪುಸ್ತಕ ಓದಿ ಮುಗಿಸಿದರೂ ಪ್ರೇಮಾ ಕಾರಂತರು ಕಾಡುತ್ತಾರೆ ಮತ್ತು ಆ ಮೂಲಕ ಗೆಲ್ಲುತ್ತಾರೆ!
Saturday, August 24, 2013
ಬೊಜ್ಜು
ಹೀಗೆ ತೋರ ಕಾಣುವ
ಹೊಟ್ಟೆಯನ್ನೂ,
ಶರ್ಟ್ ಮಡಿಸುವಂತೆ ಮಡಿಸಿ
ಇನ್ ಮಾಡುವಂತಿದ್ದರೆ;
ಒಂಚೂರು ದೂರಕ್ಕೂ 'ಉಸ್ಸಪ್ಪ',
ಈಗಷ್ಟೇ ಹೊಟ್ಟೆ ತುಂಬ ತಿಂದು
ರಾತ್ರಿ ಏನೂ ಬೇಡಾ ಅಂದರೂ,
ಹಗಲು ಮಗುಚಿ ಇರುಳ
ಪುಟ ತೆರೆದಂತೆ,
'ಅಬ್ಬಬ್ಬಾ' ತಾಳಲಾರದೆ,
ಇನ್ನು, ಇನ್ನಷ್ಟು;
ಒಂದು ಗಂಟೆ ವಾಕು, ಅರ್ಧ ಗಂಟೆ ಯೋಗ,
ಒಂಚೂರು ನಿಂಬೆ ರಸಕ್ಕೆ ಜೇನು,
ಬೇಡವಾದರೆ
ಬೇವಿನಸೊಪ್ಪು;
ಮರೆತೀರಾ ಖಾಲಿ ಹೊಟ್ಟೆಗೆ!
ಎರಡು ದಿನ, ತಪ್ಪಿದರೆ ಮೂರು,
ಮತ್ತೆ ಮೊದಲಿನಂತೆ,
ಯಾರು ಏಳ್ತಾರೆ ಅಷ್ಟು ಬೇಗ?
ಸ್ವಲ್ಪ ಅತ್ತಿತ್ತ ಆದರೂ ಗ್ಯಾಸು;
ಕಲ್ಲೇ ತಿಂದರೂ ಲಟ್ಟಕನಿರುವ ಹಳಬರು,
ಐ ಆ್ಯಮ್ ವಾಚಿಂಗ್ ಮೈ ಫಿಗರ್ ಹೊಸಬರು,
ಕನಸಲೂ ಸಿಕ್ಸು ಪ್ಯಾಕು,
ಗೂಗಲ್ ತುಂಬಾ ಏಳೇ ದಿನದಲ್ಲಿ
ಹತ್ತು ಕೆ.ಜಿ. ಖಾಲಿ
ಜಾಹೀರಾತು,
ನಿನ್ನೆಯ ಫೋಟೋಗಳ ತುಂಬಾ
ಆಪ್ಯಾಯಮಾನ ನಿಟ್ಟುಸಿರು;
ಕೈ ಮತ್ತೆ ಪ್ಲೇಟಿನೆಡೆಗೇ,
ಯಾರು ಬದುಕಿದ್ದಾರೆ ಸಾವಿರ ವರ್ಷ??
ಇದು ಮುಗಿದರೆ ಮತ್ತೆ ಮುಟ್ಟಲ್ಲ ದೇವರಾಣೆ;
ಟೈರು ಸವೆಯುವ ಆಸೆಗೆಲ್ಲಿದೆ ಕೊನೆ!!
Sunday, July 28, 2013
ಸಿಡ್ನಿಶೆಲ್ಡನ್ jotheya ಮಳೆಗಾಲ
ಅರೆರೆ, ಚೆನ್ನಾಗಿದೆಯಲ್ಲ, ಅಂತ ಊರಿಗೆ ಬಂದವನೇ ಒಂದೊಂದಾಗಿ ಅವರ ಕಾದಂಬರಿಗಳ ಬೆನ್ನುಬಿದ್ದೆ.
ಹಿಡಿದು ಕೂರಿಸುವ , ಹಿಡಿತಕ್ಕೆ ಸಿಗುವ ಇಂಗ್ಲೀಷಿನ ಷೆಲ್ಡನ್ ಸಮಯ ಕೊಳ್ಳಲು ಒಳ್ಳೆ ಸಂಗಾತಿ;
'ಅದರ್ ಸೈಡ್ ಆಫ್ ಮಿಡ್ ನೈಟ್ ','ವಿಂಡ್ ಮಿಲ್ಸ್ ಆಫ್ ಗಾಡ್ಸ್ ',ಸಾಂಡ್ಸ್ ಆಫ್ ಟೈಮ್ ',ಮೆಮೊರೀಸ್ ಆಫ್ ಮಿಡ್ನೈಟ್ ','ಸ್ಕೈ ಈಸ್ ಫಾಲಿಂಗ್ ','ಡೂಮ್ಸ್ ಡೇ ಕಾನ್ಸ್ಪಿರಸಿ ','ಬ್ಲಡ್ ಲೈನ್' ಮುಗಿಸಿದೆ.ಇನ್ನೂ ಹಲವಾರು ಪುಸ್ತಕ ಗೆಳೆಯ ಅಲ್ತಾಫ್ ತಮ್ಮ ಖಜಾನೆಯಿಂದ ಎತ್ತಿ ಕೊಟ್ಟರು;
ಅಲೆದಾಡಿ ತಂದ ಕನ್ನಡ ಪುಸ್ತಕಗಳು ಕರೆಯುತ್ತಿದ್ದರೂ , ಇವನ್ನು ಮುಗಿಸಬೇಕು ಅಂತ ಹಟ ಹಿಡಿದು ಕೂತಿದ್ದೇನೆ!
ಹೆಂಗಿದ್ದರೂ ಮನಸು ಚಿಟ್ಟೆ ತರಾ ಆಲ್ವಾ ! ಮತ್ತೇನಾದರೂ ಕರೆದರೆ ಹೊರಡೋದೇ;
ಸುರಿವ ಮಳೆಗೆ , ಹೊರ ಹೋಗಲೂ ಮನಸ್ಸಿಲ್ಲದೆ, ಡ್ಯೂಟಿಗೆ 'ಛೇ ' ಅಂದುಕೊಳ್ತಾ ಹೋಗೊಕೂ ಉದಾಸೀನ;
ಸದ್ಯಕ್ಕಿಷ್ಟೇ ;
Thursday, July 4, 2013
what's with tea?
Tuesday, June 25, 2013
ಜನಾರ್ದನ ಭಟ್ಟರ 'ಅನಿಕೇತನ'
ಜನಾರ್ದನ ಭಟ್ ರ ನಡುಕಣಿ ಕಾದಂಬರಿ ತ್ರಿವಳಿಗಳಲ್ಲಿ ಕೊನೆಯದಾದ ಇದು (ಉಳಿದೆರಡು 'ಉತ್ತರಾಧಿಕಾರ' ಮತ್ತು 'ಹಸ್ತಾಂತರ' ) ಒಂದು ಕಾಲಗಟ್ಟದ ಜನಜೀವನದ ಚಿತ್ರಣವನ್ನು ಯಶಸ್ವಿಯಾಗಿ ತೆರೆದಿಡುವುದರ ಮೂಲಕ ಗೆಲ್ಲುತ್ತದೆ.

















