ಖಾಲಿ ಹೊಟ್ಟೆಗೆ
ತಗೊಂಡ ಮಾತ್ರೆ ಥರಾ
ನಿನ್ನ ನಶೆ ಇನ್ಸ್ಟಾಂಟು;
ಸರ್ರನೆ ಏರಿ
ಸರಿಯಾದ ಹೆಜ್ಜೆ
ಇಡುವಂತೆ ಫೀಲು,
ಓಹ್,
ದಾರಿ ಮಾತ್ರ ಪೂರ್ತಿ ಅಂಕು-ಡೊಂಕು ,
ನೆಲ ಜಾರಿ
ಮುಗಿಲ ಮೇಲಿನ ಒಂಟಿ ಯಾನ;
ಯಾವುದೋ ಶಬ್ದವೂ ದೊಡ್ಡ
ಚಿತ್ರವಾದಂತೆ,
ಸನ್ನೆಗಳಿಗೆಲ್ಲ ಹೊಸ ಅರ್ಥ;
ಈ ಮರುಳಿನ ಕೊನೆ ನೆನೆದರೆ,
ಬೇಡ ಬೇಡ
ಇದೇ ಸಾಕು,
ಸದ್ಯ ಮತ್ತು ಶಾಶ್ವತ!