ಮೊನ್ನೆ ಜೂನ್ ನಲ್ಲಷ್ಟೇ ಸುಮ್ಮನೆ ಅಂಡಲೆಯಲು ಬೆಂಗಳೂರಿಗೆ ಹೋಗಿದ್ದಾಗ ಭಾವನ ಮನೆಯ ಟೇಬಲ್ ಮೇಲೆ ಬಿದ್ದುಕೊಂಡಿದ್ದ ಪುಸ್ತಕ ಕಂಡಿತು. ಇಂಗ್ಲಿಷು ! ಯಾವಾಗಲೂ ಕಬ್ಬಿಣದ ಕಡಲೆಯೇ! ಓಹ್ , ಸಿಡ್ನಿ ಶೆಲ್ಡನ್ ಅಂತ ಆಥರ್ ನ ಹೆಸರು ನೋಡುವಾಗಲೇ 'ಅದು ಸೀರಿಯಸ್ ಆಗಿ ಓದುವ ಪುಸ್ತಕಗಳೇ ಅಲ್ಲ' ಅಂತ ಗೆಳೆಯ ಮೂಗು ಮುರಿಯುತ್ತಿದ್ದದ್ದು ನೆನಪಾಯಿತು; ಹಿಂಬದಿಯ ಕವರಲ್ಲಿ 'ಬೆಸ್ಟ್ ಸೆಲ್ಲರ್' ಅಂತೇನೋ ಹೊಗಳಿಕೆ ಕಂಡು ಕುತೂಹಲ ಗರಿಗೆದರಿ 'ನೋಡುವ,ಅರ್ಥ ಆಗುತ್ತಾ' ಅಂತ ಪುಟ ತಿರುಗಿಸಲು ಶುರು ಮಾಡಿದೆ, 'ನೆಕೆಡ್ ಫೇಸ್ ' ಅಂತ ಕಾದಂಬರಿಯ ಹೆಸರು. ಸೈಕ್ರಿಯಾಟ್ರಿಸ್ಟ್ ಒಬ್ಬನ ಪೇಷೆಂಟುಗಳೆಲ್ಲ ಒಬ್ಬೊಬ್ಬರಾಗಿ ಕೊಲೆಯಾಗೋದು ,ಅವನ ಹಿಂದೆ ಕೊಲೆಗಡುಕರು ಬೀಳೋದು ಹಾಗೆ ಒಂದು ಮಿಸ್ಟರಿ ಕಥೆ;
ಅರೆರೆ, ಚೆನ್ನಾಗಿದೆಯಲ್ಲ, ಅಂತ ಊರಿಗೆ ಬಂದವನೇ ಒಂದೊಂದಾಗಿ ಅವರ ಕಾದಂಬರಿಗಳ ಬೆನ್ನುಬಿದ್ದೆ.
ಹಿಡಿದು ಕೂರಿಸುವ , ಹಿಡಿತಕ್ಕೆ ಸಿಗುವ ಇಂಗ್ಲೀಷಿನ ಷೆಲ್ಡನ್ ಸಮಯ ಕೊಳ್ಳಲು ಒಳ್ಳೆ ಸಂಗಾತಿ;
'ಅದರ್ ಸೈಡ್ ಆಫ್ ಮಿಡ್ ನೈಟ್ ','ವಿಂಡ್ ಮಿಲ್ಸ್ ಆಫ್ ಗಾಡ್ಸ್ ',ಸಾಂಡ್ಸ್ ಆಫ್ ಟೈಮ್ ',ಮೆಮೊರೀಸ್ ಆಫ್ ಮಿಡ್ನೈಟ್ ','ಸ್ಕೈ ಈಸ್ ಫಾಲಿಂಗ್ ','ಡೂಮ್ಸ್ ಡೇ ಕಾನ್ಸ್ಪಿರಸಿ ','ಬ್ಲಡ್ ಲೈನ್' ಮುಗಿಸಿದೆ.ಇನ್ನೂ ಹಲವಾರು ಪುಸ್ತಕ ಗೆಳೆಯ ಅಲ್ತಾಫ್ ತಮ್ಮ ಖಜಾನೆಯಿಂದ ಎತ್ತಿ ಕೊಟ್ಟರು;
ಅಲೆದಾಡಿ ತಂದ ಕನ್ನಡ ಪುಸ್ತಕಗಳು ಕರೆಯುತ್ತಿದ್ದರೂ , ಇವನ್ನು ಮುಗಿಸಬೇಕು ಅಂತ ಹಟ ಹಿಡಿದು ಕೂತಿದ್ದೇನೆ!
ಹೆಂಗಿದ್ದರೂ ಮನಸು ಚಿಟ್ಟೆ ತರಾ ಆಲ್ವಾ ! ಮತ್ತೇನಾದರೂ ಕರೆದರೆ ಹೊರಡೋದೇ;
ಸುರಿವ ಮಳೆಗೆ , ಹೊರ ಹೋಗಲೂ ಮನಸ್ಸಿಲ್ಲದೆ, ಡ್ಯೂಟಿಗೆ 'ಛೇ ' ಅಂದುಕೊಳ್ತಾ ಹೋಗೊಕೂ ಉದಾಸೀನ;
ಸದ್ಯಕ್ಕಿಷ್ಟೇ ;

No comments:
Post a Comment