ಬಸ್ಸಲ್ಲಿ ಹೀಗೆ ಕಿಟಕಿಗೆ ತಲೆಯಾನಿಸಿಕೊಂಡು ಹೊರಗೆ ನೋಡುತ್ತಾ ನಿದ್ದೆಗೆ ಜಾರುವಾಗ ಎಂದೂ ಬರೆಯಲಾಗದ ಕತೆಯ ಸಾಲುಗಳು ಒತ್ತರಿಸಿ ಬರುತ್ತವೆ. ಅದನ್ನೇ ಟೈಪಿಸಲೋ ಬರೆಯಲೋ ಹೊರಟರೆ ದಿಕ್ಕಾಪಾಲಾಗಿ ಓಡುತ್ತವೆ. ಬಹುಶಃ ಅದು ಬೇಡುವ ಅನುಭವದ ದ್ರವ್ಯಕ್ಕೂ, ತಾಳ್ಮೆಗೂ ನಾನಿನ್ನೂ ಬಲಿತಿಲ್ಲ ಅಂತ ಸುಳ್ಳೇ ಸಮಾಧಾನ!
ನೆನಪು ಹಿಂಜಿ ಹತ್ತಿಯಂತೆ ತೆಳುವಾದರೂ ಮತ್ತೆ ಮತ್ತೆ ಅದೇ ಓಣಿಗಳಲ್ಲಿ ನುಗ್ಗುವ ಮನಸಿನ ಧಾವಂತದ ಅರ್ಥವೇನು ಅಂತ ಗೊತ್ತಿಲ್ಲ. ' ನಾನು ಚಿಕ್ಕೋನಿದ್ದಾಗ ' ಅಂತ ಶುರುವಾಗುವ ಎಲ್ಲ ಕತೆಗಳೂ ಮತ್ತದೇ ಕ್ಲೀಷೆಯಾಗಿ ಹೇಳುವವನಿಗೇ ಬೇಸರವಾಗಿಬಿಡುತ್ತದೆ. ಹೊಸ ಅನುಭವಗಳಿಗೆ ತೆರೆದುಕೊಳ್ಳಲು 'ಕಂಫರ್ಟ್ ಝೋನ್' ಬಿಟ್ಟು ಬರುವ, ಉದಾಸೀನದ ಮೂಟೆಯ ಇಳಿಸುವ ಅನಿವಾರ್ಯತೆ ಇರುವ ಕಾರಣ ಅದು ರಿಸ್ಕ್.
ಹೀಗೆ ಯಾವತ್ತಾದರು ಲಹರಿಯ ಗುಂಗಲ್ಲಿ ಬಂದಷ್ಟು ಬರೆದರೆ ಬರೆಯಲು ಸುಲಭದಲ್ಲಿ ಸಿಕ್ಕಿದರೇ ಅದೇ ಪುಣ್ಯ, ನಡು ನಡುವೆ ಈಗಿನ ಗೀಚುವಿಕೆ ಮುಂದೆಂದೋ ಯಾಕಪ್ಪಾ ಬರೆದೆ ಎಂಬ ಹಳಹಳಕೆಯಾಗಬಾರದು ಅಂತಲೇ ಡಿಲೀಟಾಗಿ ಹೋಗುತ್ತೆ.
ಒಂದಿಷ್ಟು ಹಾರ್ಮೋನುಗಳ ಆಟಾಟೋಪಕ್ಕೆ ಏನೆಲ್ಲ ಸಹಿಸಬೇಕು ಅಂದರೇ ದಿಗಿಲಾಗುತ್ತೆ!
Saturday, July 26, 2014
ಬರೆಯಲಾರದ ಕಷ್ಟ
Subscribe to:
Post Comments (Atom)
ಬರೆ ಹರಿ, ಹರಿದು ಹರಿದು ಬರೆ, ಬರೆದು ಬರೆದು ಹರಿ :)
ReplyDelete