Friday, December 10, 2010

ಭಯದ ಮೂಲ ಕತ್ತಲಲ್ಲ...




                                     ಚಿಕ್ಕವನಿದ್ದಾಗ, ಕತ್ತಲೆಂದರೆ ಏನೋ ಹೆದರಿಕೆ;
                                         ಆ ಅಂಧಕಾರದಿಂದ ರಾಕ್ಷಸನೊಬ್ಬ ಟಣ್ಣನೆ ಜಿಗಿದು,
                                          ಯಾವ ಮಾಯದಲ್ಲೋ ನನ್ನ ಹೊತ್ತೊಯ್ದರೆ?
                              ಆಮೇಲೆ, ದೊಡ್ಡವನಾದಂತೆ ರಾಕ್ಷಸನ ರೂಪವೆಲ್ಲಾ ಬದಲಾಗುತ್ತಾ ಬಂತು,
              ಏನೋ ತಂಟೆ ಮಾಡಿದ್ದಕ್ಕೆ ಅಜ್ಜಿ ಬೈಯ್ದಾಗ, ಅರೆ! ಆ ರಾಕ್ಷಸ ಇವರೇ ಅಲ್ಲವಾ? ಎಂದೆನಿಸುತ್ತಿತ್ತು;
         ಶಾಲೆಯಲ್ಲಿ ಮಾಸ್ಟ್ರು ಯಾಕೋ ಹೊಡೆದಾಗ,ದಿಡೀರ್ ಎಂಬಂತೆ ಅವರ ರೂಪದಲ್ಲಿ ರಾಕ್ಷಸ ನೆಗೆದು ಬರುತ್ತಿದ್ದ,

                ಮತ್ತೂ ಬೆಳೆದಂತೆಲ್ಲಾ ರಾಕ್ಷಸ ಬರೋದು, ಮಕ್ಕಳನ್ನ ಹೊತ್ತೊಯ್ಯೊದು
                  ಎಲ್ಲಾ  ಸುಳ್ಳೆಂದು ತಿಳಿದ ಬಳಿಕವೂ,
                       ನನ್ನೊಳಗಿನ ಯಾವುದೋ ಕೀಳರಿಮೆ ಅಗಾಧವಾಗಿ ಬೆಳೆದು,
                      ರಾಕ್ಷಸನ ಇರುವಿಕೆಯ ಅರ್ಥಹೀನತೆ ಸುಳ್ಳೇ ಎನಿಸುತ್ತಿತ್ತು.
                            ಕೆಲವೊಮ್ಮೆ ರಾತ್ರಿಯ ಕನಸುಗಳಲ್ಲಿ, ಅದೇ ರಾಕ್ಷಸ ಬಾಲ್ಯದಲ್ಲಿದ್ದಂತೆ,
                             ಪುನಹ ಕತ್ತಲಿನಾಳದಿಂದೆಲ್ಲಿಂದಾದರೂ ಹಾರಿ ಬಂದರೆ,
                                ತಿವಿದರೆ, ಚಚ್ಚಿದರೆ?
                              ಇನ್ನೊಮ್ಮೆ ಆ ರಾಕ್ಷಸನಲ್ಲಿ ನನ್ನ ಮುಖ ಛಾಯೆ!
                        ನನ್ನೊಳಗೊಬ್ಬ ರಾಕ್ಷಸನಿದ್ದಾನೆ ಎಂದೆನಿಸಿ ಕನ್ನಡಿಯಲ್ಲಿ
                            ಮುಖ ನೋಡಲೂ ಭಯವಾಗುತ್ತಿತ್ತು!
                        ನನಗೆ ನಾನೇ ಒಬ್ಬ ರಾಕ್ಷಸ! ಎಂಥಾ ವಿಚಿತ್ರ ಎನಿಸುತ್ತಿದ್ದರೂ,
                       ನಿರಾಕರಿಸಲು ಮಾತ್ರ ಆಗುತ್ತಲೇ ಇರಲಿಲ್ಲ..

      ಈಗ,
                 ಯಾವುದೋ ಒಂದು ಮೈ ಮರೆತ ಗಳಿಗೆಯಲ್ಲಿ,
             ನನ್ನೊಳಗಿಂದ ಒಬ್ಬ ರಾಕ್ಷಸ, ಅದೇ ಬಾಲ್ಯಕಾಲದಂತೆ,
              ಕತ್ತಲಿನ ನಾಭಿಯಿಂದ, ನಿಧಾನವಾಗಿ ನಡೆಯುತ್ತಾ ಬಂದು,ನನಗೊಂದು
             ಸರ್ ಪ್ರೈಸ್ ವಿಸಿಟ್ ಕೊಡುವನೆಂಬ ಹೆದರಿಕೆ;
            ರಾತ್ರಿಗಳಲ್ಲಿ,ಕತ್ತಲಿನ ಮೂಲೆಗಳಲ್ಲಿ,
             ಆರಾಮವಾಗಿ ನಿದ್ರಿಸಲೂ ಬಿಡುತ್ತಿಲ್ಲ..

                  ಒಬ್ಬ ಸೂರ್ಯನ ಬೆಳಕು, ಒಂದು ದೀಪ, ಒಂದು ಟಾರ್ಚ್,
                    ಉಹೂಂ, ಕತ್ತಲೆಯನ್ನು ಓಡಿಸಲು ಹೇಗೆ ಸಾಧ್ಯ?
                   ಕತ್ತಲೆಯೊಳಗಿರುವ ರಾಕ್ಷಸನನ್ನೂ!
                      ಭಯದ ಮೂಲ ನಿಜವಾಗಿಯೂ ಕತ್ತಲೆ? ಆಗಿರಲಿಕ್ಕಿಲ್ಲ..
                      ಕತ್ತಲೆಯೊಳಗಿನ ರಾಕ್ಷಸನೇ? ಉಹೂಂ ಅಲ್ಲ,
                    ಮತ್ತೆ?

4 comments:

  1. ಅಭಿನ೦ದನೆಗಳು ಪ್ರಶಾ೦ತ್.....ಸೊಗಸಾಗಿದೆ....ಪ್ರಯತ್ನ ಹೀಗೇ ಮು೦ದುವರಿಸಿ.........
    ನಿಮ್ಮ ಕವನ ನನ್ನಲ್ಲಿ ಮೂಡಿಸಿದ ಭಾವ ಹೀಗಿದೆ........
    ಭಯಾಭಯ
    ಎಕಾ೦ಗಿ ಮನದ ಮನೆಯ ಮೂಲೆಯಲ್ಲಿ
    ಪವಡಿಸಿರುವ ಪುಟ್ಟ ಆಸೆ-ಆಕಾ೦ಕ್ಷೆ-ಬಯಕೆಯ
    ಬಾಲಕ ತನ್ನ ಮನೋಭಿಲಾಷೆಯನು ಸ೦ತಸದಿ ಅರುಹಿದಾಗ
    ಸ್ವೀಕರಿಸಿ ಅದರಲಿ ಒ೦ದಾಗುವ ಜೊತೆಗಾರನ್ನಿಲ್ಲದೆ ಒ೦ಟಿಯಾದಾಗ
    ಆಪುಟ್ಟ ಕ೦ದಮ್ಮನ ಕ೦ಗಳಲ್ಲಿ ಭರದಿ ಮೂಡುವ
    ವಿವಿಧ ಭಾವಗಳು ಗರಿಗೆದರಿ ನರ್ತಿಸತೊಡಗಿದಾಗ
    ತನಗರಿವಿರು ಪರಿಚಿತ ಪರಿಸರದೊಡನೆ ಒ೦ದಾಗಿ ಆನ೦ದದಿ ಮೈಮರತ ಮನದಿ
    ತಟ್ಟನೆಗೋಚರಿಸುವ ಅಪರಿಚಿತ ಅಸ್ಪಷ್ಟ ಅಗೋಚರ ರೂಪಭಾವಗಳ
    ಅರ್ಥಹೀನ ಚಿತ್ರ-ವಿಚಿತ್ರ ಅಸ೦ಬದ್ದ ವಿಚಾರ ಸರಮಾಲೆಗಳನು
    ಅರ್ಥಿಸಿಕೊಳ್ಳಲು ಶಕ್ತವಲ್ಲದಆ ಪುಟ್ಟ ಕ೦ದಮ್ಮನ ಮನ ಆ
    ಗೊ೦ದಲದಿ೦ದ ಹೊರಬರಲು ಹೊಯ್ದಾಡುತಾ ಆ
    ಭ್ರಮೆಯ ಚಕ್ರವ್ಯೂಹವ ಭೇದಿಸುವ ದಿಕ್ಕುಕಾಣದೆ
    ತೊಳಲಾಡುವ ಆ ಅಭೇದ ಸನ್ನಿವೇಶವೇ ಭಯವಾಗುವುದೇ?ಭಯವಾಗುವುದು........ಕಾಡುವುವುದು
    ಕಾಡುವುದು ಆ ಮುಗ್ದ ಮನವ......ಅ೦ತಲೇ ಚೀರುವುದು ಬೆದರಿದ ಮನ ಭಯ ಭಯಾ........ಎ೦ದು ಎ೦ದೆ೦ದೂ.....
    ಆದರೆ......................
    ಒ೦ದು ಪ್ರೀತಿಯ ಅಪ್ಪುಗೆ,ಒ೦ದು ಸ್ನೇಹದ ಅಭಯ ಹಸ್ತ
    ಒ೦ದು ಒಲವಿನ ಮಾತಿ,ಒ೦ದು ಧೈರ್ಯದ ನುಡಿ
    ಆಗಬಲ್ಲದು ಸ೦ಜೀವಿನಿ ಬೆದರುವ/ಬೆದರಿದ ಆ ಮನಕೆ
    ಮಾತೆಯ ಮಮತೆಯ ಮಡಿಲು,ಮಮತೆಯ ಬಾಹುಬ೦ಧನ
    ಆಗಬಲ್ಲದು ಪ್ರತಿಕ್ಷಣ ಹಗಲಿರಳು ಅನುದಿನ ಅನುಗಾಲ ಆ
    ಚಿತ್ತದ ಭ್ರಮೆಯ ಭಯಕೆ ದಿಗ್ಬ೦ಧನ......

    ಬಡಿದೋಡಿಸುವುದು ಆ ಭಯದ ಭ್ರಮೆಯಾ......,
    ಮೂಡಿಸುವುದು ಸಪ್ತವರ್ಣಗಳ ಹರ್ಷ ಚಿತ್ತಾರವ
    ಬೆಳಗುವುದು ಪ್ರಶಾ೦ತ ಮನದಿ ಒಲವಿನ ಜ್ಯೋತಿಯಾ....
    ನುಡಿಸುವುದು ಸಪ್ತರಾಗಗಳ ಸುಮಧುರ ಗಾನವ........
    ಆಹಾ ಮನ ಏನಿದು ಮಾಯೆ.... ಭಯದ ಛಾಯೆ ನಿನ್ನ ನಾನರಿಯೆ......
    ನಿನ್ನ ನಾನರಿಯೆ,ನೀ ನನ್ನ ಅರಿಯೇ???!!!!ಛೇ ಛೇ...ಬಿಡು ಬಿಡು
    ನನ್ನ ನಾ ಅರಿತಿರುವೆ......ನೀ ನನ್ನಾವರಿಸಲಾರೇ......
    ನಿನ್ನ ಈ ಭಯದಾಟದ ಅರ್ಭಟ ಇನ್ನು ಸಾಗದು ನನ್ನಮು೦ದೆ
    ನಾನೇ ಜಯಶಾಲಿ......ನೀ ಶರಣಾನಾದೆ ಪ್ರೀತಿಗೆ....ಸರಿ ಹಿ೦ದೆ.....||

    ReplyDelete
  2. thumbaa chennagide amrutha...nannadakkintha nimma kavithe adbhutha

    ReplyDelete
  3. Wow mom... GREAT... very nice....

    ReplyDelete