ಒಂದು ದಿನ ತಟ್ಟನೆದ್ದು ಇಷ್ಟರವರೆಗೆ ಸೋಮಾರಿತನದಿಂದ ಬಾಕಿಯಾದ ಕೆಲಸಗಳ ಹರಿಬರಿಯಲ್ಲಿ ಮುಗಿಸತೊಡಗಿದ್ದು ಗಮನಕ್ಕೆ ಬಂದು ನನಗೇ ಆಶ್ಚರ್ಯವಾಯಿತು; ಬೂದಿಯಿಂದ ಮೈ ಕೊಡವಿಕೊಂಡೆದ್ದ ನಾಯಿಯಂತೆ ಮನಸ ಆಳದಲ್ಲಿದ್ದ ಮರೆತ ಯೋಚನೆಗಳೆಲ್ಲ ತಾ ಮುಂದು ನಾ ಮುಂದು ಅಂತ ಮುಗಿ ಬಿದ್ದಂತೆ! ಅದ್ಯಾವುದೋ ದಿನ ಮುಗಿದರೂ ಕೊಡಲಾರದ ಲೈಬ್ರರಿ ಪುಸ್ತಕ, ಕಟ್ಟದಿದ್ದ ಬಿಲ್ಲು, ಹೇಳ ಮರೆತ ಐ ಲವ್ ಯೂ , ನೆನಪಾಗದಿದ್ದ ಕನಸು , ಅರ್ಧ ಬರೆದ ಕಥೆ, ಪೇರಲೆಯ ವಾಸನೆ , ಹೆಂಡತಿಯ ಕೆನ್ನೆಯ ಮಚ್ಚೆ, ಚಾರ್ಜಿಲ್ಲದ ಮೊಬೈಲು ಇವೆಲ್ಲವೂ ತಾವು ಇಷ್ಟು ಕಾಲ ಇದ್ದೆವೆಂಬ ಸಣ್ಣ ಸುಳಿವೂ ಕೊಡದೆ ಈಗ ಮುಗಿ ಬಿದ್ದರೆ ಹುಲು ಮನಸಿನ ಪಾಡೇನು?
No comments:
Post a Comment