Monday, December 13, 2010

ಹೀಗಿದೆ ಈಗ ಕಥೆ...

ನಿನ್ನೆಯ ನೆನಪು; ನಾಳೆಯ ಕನಸುಗಳ ನಡುವೆ,
ಇಂದಿನ ಬದುಕಿನ ಜೋಕಾಲಿ.
ಜೀಕಿದಂತೆಲ್ಲ ಅತ್ತ ಕೊಂಚ, ಇತ್ತ ಕೊಂಚ,
ಕನವರಿಕೆಗಳ ಮೇಲಾಟ.
ಆಸೆ ಎಂಬ ಹಾಯಿ ದೋಣಿಗೆ ನಿರೀಕ್ಷೆಗಳ ಭಾರ,
ಗಾಳಿ ಬೀಸಿದತ್ತ ಚಿತ್ತ;
ಕನಸುಗಳ ಕ್ಯಾನ್ವಾಸ್ ತುಂಬಾ ಕರಗಿದ ಬಣ್ಣಗಳ ಚಿತ್ತಾರ,
ಇರದ ಕೇಂದ್ರವ ಹುಡುಕುತ್ತಾ ಪರಿಧಿಯಲಿ ಅಲೆದಾಟ,
ಅದೇ ಸಂಜೆ, ಅದೇ ಕಾತರ;
ಎದೆಗೂಡಲ್ಲಿ ಅದೇ ಭಾವಗಳು,
ಹೆಸರು ಮಾತ್ರ ಬೇರೆ!
ಈ ಕ್ಷಣದ ಈ ತವಕ, ಈ ತಲ್ಲಣ;
ಮುಗಿದಾಗಿನ ನಿರಾಶೆ ಮತ್ತು ಮೌನ...

2 comments:

  1. ಭಾವಗಳಿಗೆ ಹೆಸರನ್ನು ಕೊಟ್ಟವರು ಜೊತೆಯಿಲ್ಲದಾಗ,
    ತೊಳಲಾಟವಲ್ಲದೆ ಅನುಭವಿಸಬಹುದೆ ಮತ್ತೇನಾದರು ಮನಸ್ಸೀಗ????????

    very good lines... too good...

    ReplyDelete